
ವಿಜಯಪುರ: ಮಳೆ ಕೈಕೊಟ್ಟಿದ್ದರಿಂದ ನೀರಿನ ಕೊರತೆಯಾಗಿ ತಾನೇ ಬೆಳೆದ ಕಬ್ಬನ್ನು ರೈತರೊಬ್ಬರು ನಾಶಪಡಿಸಿದ್ದಾರೆ.
ನೀರಿನ ಕೊರತೆಯಿಂದಾಗಿ ಹೊಲದಲ್ಲಿ ಒಣಗಿ ನಿಂತಿದ್ದ 7 ಎಕರೆ ಕ0ಬ್ಬು ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ರೂಟರ್ ಹೊಡೆಸಿ ಜಮೀನು ಅರಗಿಸಿದ್ದಾರೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದಲ್ಲಿ ಜಮೀನು ಹೊಂದಿರುವ ಬಸರಕೋಡದ ರೈತ ಗುರುನಾಥ ಬಿರಾದಾರ ಅವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆಯನ್ನು ನಾಶಪಡಿಸಿದ್ದಾರೆ. ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದು, ಜಮೀನಿನಲ್ಲಿದ್ದ ಎರಡು ಬೋರ್ವೆಲ್ ಮತ್ತು ಬಾವಿಯಲ್ಲಿಯೂ ನೀರು ಕಡಿಮೆಯಾಗಿ ಕಬ್ಬು ಬೆಳೆಗೆ ನೀರು ಕೊರತೆಯಾಗಿದೆ. ಇದರಿಂದಾಗಿ 7 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಒಣಗಿದ್ದು, ಹಸಿ ಇದ್ದ ಕಬ್ಬನ್ನು ದನ ಕರುಗಳಿಗೆ ಕಟಾವು ಮಾಡಿ ಹಾಕಿ ಒಣಗಿದ ಕಬ್ಬು ರೂಟರ್ ಹೊಡೆಸಿ ಸಂಪೂರ್ಣ ಆರಗಿಸಿದ್ದಾರೆ. ಇದರಿಂದಾಗಿ ಗುರುನಾಥ್ ಅವರಿಗೆ ನಷ್ಟ ಉಂಟಾಗಿದೆ.