ನವದೆಹಲಿ: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಕಲಾಪದಲ್ಲಿ ಮುಕ್ತ ಮನಸ್ಸಿನಿಂದ ಸಂವಾದ ನಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಸಂಸತ್ ಬಳಿ ಮಾತನಾಡಿದ ಪ್ರಧಾನಿ ಮೋದಿ, ಸದನದಲ್ಲಿ ಗಮನಾರ್ಹ ಚರ್ಚೆ, ವಿಶ್ಲೇಷಣೆ ನಡೆಯಲಿ. ಅಧಿವೇಶನವನ್ನು ರಾಷ್ಟ್ರದ ಹಿತಕ್ಕಾಗಿ ಬಳಸಿಕೊಳ್ಳಿ. ಎಲ್ಲರ ಸಹಕಾರದಿಂದಲೇ ಸದನ ನಡೆಯಬೇಕು. ಸದನದ ಅಮೂಲ್ಯ ಸಮಯವನ್ನು ಬಳಸಿಕೊಳ್ಳಿ ಎಂದು ಸಂಸತ್ ಸದಸ್ಯರಿಗೆ ಸಲಹೆ ನೀಡಿದ್ದಾರೆ.
ಎಲ್ಲರ ಸಹಕಾರದಿಂದಲೇ ಪ್ರಜಾಪ್ರಭುತ್ವ ನಡೆಯುತ್ತಿದೆ. ಸಂಸತ್ತು ಸಂವಾದ, ಚರ್ಚೆಯ ತೀರ್ಥ ಕ್ಷೇತ್ರ. ಎಲ್ಲರೂ ಸೇರಿ ದೇಶದ ಪ್ರಗತಿಗೆ ಸಂಕಲ್ಪ ಮಾಡೋಣ ಎಂದು ಹೇಳಿದರು.
ಇಂದಿನಿಂದ ಆರಂಭವಾಗಲಿರುವ ಸಂಸತ್ ಮುಂಗಾರು ಅಧಿವೇಶನ ಆಗಸ್ಟ್ 12 ರ ವರೆಗೆ ನಡೆಯಲಿದೆ. ಅಧಿವೇಶನದಲ್ಲಿ 32 ಮಸೂದೆಗಳು ಮಂಡನೆಯಾಗುವ ನಿರೀಕ್ಷೆ ಇದೆ.