ನವದೆಹಲಿ: ಈ ಬಾರಿ ಉತ್ತಮ ಮುಂಗಾರು ನಿರೀಕ್ಷೆ ಇದ್ದು, ಸಾಮಾನ್ಯಕ್ಕಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎರಡು ದಿನಗಳ ಹಿಂದೆ ಸ್ಕೈಮೇಟ್ ವೆದರ್ ಕೂಡ ಇದೇ ರೀತಿ ಸಿಹಿ ಸುದ್ದಿ ನೀಡಿತ್ತು.
ದೇಶದಲ್ಲಿ ಶೇಕಡ 75 ರಷ್ಟು ಮಳೆಗೆ ಕಾರಣವಾಗುವ ನೈಋತ್ಯ ಮುಂಗಾರು ಮಾರುತಗಳು ಈ ಬಾರಿ ವಾಡಿಕೆಯಂತೆ ಮಳೆ ಸುರಿಸಲಿವೆ. ಕೆಲ ರಾಜ್ಯ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ದೀರ್ಘಾವಧಿಯ ಮಳೆಯಾಗಲಿದೆ. ಶೇಕಡ 98 ರಷ್ಟು ಮಳೆಯಾಗುವುದರಿಂದ ಅನುಕೂಲವಾಗಲಿದೆ.
ಕೃಷಿ ಉತ್ಪಾದನೆ ಹೆಚ್ಚಳಕ್ಕೆ, ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಭಾರತದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು ಆರ್ಥಿಕತೆಯ ಮೂಲವಾಗಿದ್ದು, ಮುಂಗಾರು ಉತ್ತಮವಾಗಿರುವುದರಿಂದ ಕೃಷಿ ಉತ್ಪಾದನೆ ಹೆಚ್ಚಳದಿಂದ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.