ನವದೆಹಲಿ: ವಾರದ ಬಳಿಕ ಕೇರಳಕ್ಕೆ ‘ಮುಂಗಾರು ಮಳೆ’ (Monsoon rain) ಆಗಮನವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (Indian Meteorological Department) ಮುನ್ಸೂಚನೆ ನೀಡಿದೆ.
ಜೂನ್ 5 ರಂದು ಹವಾಮಾನ ಇಲಾಖೆ ಮುಂದಿನ ಎರಡು ದಿನಗಳಲ್ಲಿ ಕೇರಳದಲ್ಲಿ ಮಾನ್ಸೂನ್ (Monsoon) ಆಗಮನವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿತ್ತು, ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಕಡಿಮೆ ಒತ್ತಡದ ಪ್ರದೇಶ ರಚನೆಯಾದ ಹಿನ್ನೆಲೆ ಕೇರಳಕ್ಕೆ ಮುಂಗಾರು ಪ್ರವೇಶ ತಡವಾಗಲಿದೆ ಎಂದು ಹೇಳಿದೆ.
ಬಿಸಿಲ ಬೇಗೆಯಲ್ಲಿ ಬೇಯುತ್ತಿರುವ ಜನ ಮುಂಗಾರು ಮಳೆ ಶುರುವಾಗೋದು ಯಾವಾಗ ಅಂತಾ ಕಾದು ಕೂತಿದ್ದಾರೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಕೂಡಾ ಕಂಡು ಬಂದಿದ್ದು, ಮೇಲ್ಮೈ ಸುಳಿಗಾಳಿ ಎದ್ದಿದೆ. ಹೀಗಾಗಿ, ಮುಂಗಾರು ವಿಳಂಬ ಆಗ್ತಿದೆ. ವಾತಾವರಣದಲ್ಲಿ ಆಗುತ್ತಿರುವ ಕ್ಷಿಪ್ರ ಬದಲಾವಣೆಯಿಂದಾಗಿ ಹವಾಮಾನ ಇಲಾಖೆ ಕೂಡ ಸ್ಪಷ್ಟ ಮಾಹಿತಿ ನೀಡಲು ಆಗುತ್ತಿಲ್ಲ ಎನ್ನಲಾಗಿದೆ.