alex Certify ದೇಶದ ಕೃಷಿ, ಆರ್ಥಿಕತೆಯ ಜೀವನಾಡಿ ‘ಮುಂಗಾರು ಮಳೆ’ ಬಗ್ಗೆ ಹವಾಮಾನ ಇಲಾಖೆ ಸಿಹಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಕೃಷಿ, ಆರ್ಥಿಕತೆಯ ಜೀವನಾಡಿ ‘ಮುಂಗಾರು ಮಳೆ’ ಬಗ್ಗೆ ಹವಾಮಾನ ಇಲಾಖೆ ಸಿಹಿ ಸುದ್ದಿ

ನವದೆಹಲಿ: ದೇಶದ ಕೃಷಿ ಮತ್ತು ಆರ್ಥಿಕತೆಯ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಮೇ 31ರ ವೇಳೆಗೆ ಕೇರಳಕ್ಕೆ ಪ್ರವೇಶಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ವರ್ಷ ನೈರುತ್ಯ ಮುಂಗಾರು ಮೇ 31ರ ವೇಳೆಗೆ ದಕ್ಷಿಣದ ಕೇರಳ ಪ್ರವೇಶಿಸುವ ಸಂಭವ ಇದೆ. ಈ ದಿನಾಂಕದಲ್ಲಿ 4 ದಿನ ಹಿಂದೆ ಮುಂದೆ ಆಗಬಹುದು. ಈ ಬಾರಿ ಮುಂಚಿತವಾಗಿ ಮುಂಗಾರು ಪ್ರವೇಶಿಸುತ್ತಿಲ್ಲ. ಸಾಮಾನ್ಯವಾಗಿ ಜೂನ್ 1ರಂದು ಮುಂಗಾರು ಮಾರುತಗಳು ಕೇರಳಕ್ಕೆ ಪ್ರವೇಶಿಸುತ್ತದೆ. ಅದೇ ವೇಳೆಗೆ ಈ ಬಾರಿ ಮುಂಗಾರು ಆಗಮನವಾಗಲಿದೆ.

ಜೂನ್ – ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ ಮಳೆ ತರುವ ಮುಂಗಾರು ಮಾರುತಗಳು ಈ ಬಾರಿ ದೀರ್ಘಕಾಲಿನ ಸರಾಸರಿಗಿಂತ ಹೆಚ್ಚಿನ ಮಳೆ ತರಬಹುದು ಎಂದು ಹವಾಮಾನ ಇಲಾಖೆ ಕಳೆದ ತಿಂಗಳು ತಿಳಿಸಿತ್ತು.

ದೇಶದ ವಾರ್ಷಿಕ ಮಳೆಯ ಬಹುಪಾಲು ನೈರುತ್ಯ ಮಾನ್ಸೂನ್ ಮಾರುತಗಳು ತರುತ್ತವೆ. ಈ ಅವಧಿಯಲ್ಲಿ ಖಾರೀಫ್ ಬೆಳೆಗಳನ್ನು ಬೆಳೆಯುವುದರಿಂದ ಜೂನ್ ಮತ್ತು ಜುಲೈ ತಿಂಗಳ ಅವಧಿಯ ಮುಂಗಾರು ಮಹತ್ವದ್ದಾಗಿದೆ. ಕಳೆದ ವರ್ಷ ಜೂನ್ 8ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸಿದ್ದವು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...