alex Certify ರೈತ ಸಮುದಾಯಕ್ಕೆ ಸಿಹಿ ಸುದ್ದಿ: ಈ ಬಾರಿಯೂ ಉತ್ತಮ ಮುಂಗಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತ ಸಮುದಾಯಕ್ಕೆ ಸಿಹಿ ಸುದ್ದಿ: ಈ ಬಾರಿಯೂ ಉತ್ತಮ ಮುಂಗಾರು

ನವದೆಹಲಿ: ಖಾಸಗಿ ಹವಾಮಾನ ಮನ್ಸೂಚನೆ ಕಂಪನಿಯಾದ ಸ್ಕೈಮೇಟ್ ವೆದರ್ ಸತತ ಮೂರನೇ ವರ್ಷ ಮಳೆಗಾಲ ಸಾಮಾನ್ಯವಾಗಿರುತ್ತದೆ ಎಂದು ಮುನ್ಸೂಚನೆ ನೀಡಿದೆ.

ಸ್ಕೈಮೇಟ್ ಪ್ರಕಾರ ಮಾನ್ಸೂನ್ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. 2021 ರ ಪ್ರಾಥಮಿಕ ಮಾನ್ಸೂನ್ ಮುನ್ಸೂಚನೆಯ ಪ್ರಕಾರ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮಳೆಯ ಸರಾಸರಿ ಶೇಕಡ 103 ರಷ್ಟು ಇದೆ ಎಂದು ಹೇಳಲಾಗಿದೆ.

2020 ರಲ್ಲಿ 110 2019ರಲ್ಲಿ 109 ರಷ್ಟು ಮಳೆಯಾಗಿದೆ. ಮುಂಗಾರು ಅವಧಿಯ ಸರಾಸರಿ ಉತ್ತಮವಾಗಿದ್ದು, ಈ ಬಾರಿ ಈಶಾನ್ಯ ಭಾಗದಲ್ಲಿ ಹಾಗೂ ಉತ್ತರ ಬಯಲು ಪ್ರದೇಶಗಳಲ್ಲಿ ಮುಂಗಾರು ಋತುವಿನಲ್ಲಿ ಮಳೆ ಕೊರತೆಯಾಗಬಹುದಾದ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಮಾನ್ಸೂನ್ ತಿಂಗಳುಗಳಲ್ಲಿ ಉತ್ತಮ ಮಳೆಯಾಗಲಿದೆ. ಆಂತರಿಕ ಭಾಗದಲ್ಲಿ ಅಲ್ಪಪ್ರಮಾಣದ ಮಳೆಯಾಗಲಿದೆ. ಮುಂಗಾರು ಆರಂಭದ ಜೂನ್ ತಿಂಗಳು ಮತ್ತು ಮುಕ್ತಾಯವಾಗುವ ಸೆಪ್ಟಂಬರ್ ತಿಂಗಳ ಅವಧಿಯಲ್ಲಿ ದೇಶಾದ್ಯಂತ ಉತ್ತಮ ಮಳೆಯಾಗಲಿದೆ.

ಸ್ಕೈಮೆಟ್ ಸಿಇಓ ಯೋಗೇಶ್ ಪಾಟೀಲ್ ಅವರ ಪ್ರಕಾರ, ಕಳೆದ ವರ್ಷದಿಂದ ಫೆಸಿಪಿಕ್ ಮಹಾಸಾಗರದಲ್ಲಿ ಲಾ ನಿನಾ, ಎಲ್ ನೀನೋ ಚಲನೆ ಮತ್ತು ತಟಸ್ಥವಾಗಿದ್ದು, ಮಾನ್ಸೂನ್ ಮಾರುತಗಳ ಮಳೆಗಾಲಕ್ಕೆ ಹಾನಿ ಮಾಡಬಹುದಾದ ಯಾವುದೇ ವಾತಾವರಣ ಇಲ್ಲ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...