![](https://kannadadunia.com/wp-content/uploads/2023/03/1200-900-18019967-thumbnail-4x3-monn-1024x768.jpg)
ಕೋತಿ ಮರಿಗಳನ್ನು ನಾಯಿಗಳು ಕಚ್ಚಿ ಸಾಯಿಸಿದವೆಂದು ಆ ವೇಳೆ ಕೋತಿಗಳು 250 ನಾಯಿಮರಿಗಳನ್ನು ಎತ್ತರದಿಂದ ಎಸೆದು ಸೇಡು ತೀರಿಸಿಕೊಂಡವು ಎಂದು ಭಾವಿಸಲಾಗಿತ್ತು.
ಇದೀಗ ಇತ್ತೀಚೆಗಷ್ಟೇ ಜೈಪುರ ಮಾರುಕಟ್ಟೆಯಲ್ಲಿ ಮಂಗವೊಂದು ಹಗಲು ಹೊತ್ತಿನಲ್ಲಿ ನಾಯಿ ಮರಿಯೊಂದನ್ನು ಕಸಿದುಕೊಂಡು ಹೋಗುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು ವೈರಲ್ ಆಗಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ‘ಎರಡನೇ ಗ್ಯಾಂಗ್ವಾರ್’ ಸಾಧ್ಯತೆಯ ಬಗ್ಗೆ ಹಾಸ್ಯಮಯ ಚರ್ಚೆ ನಡೆಯುತ್ತಿದೆ.
ಜೈಪುರದ ಗಂಗೌರ್ ಮಾರುಕಟ್ಟೆಯಲ್ಲಿನ ಅಂಗಡಿಯೊಂದರ ಮೇಲ್ಛಾವಣಿಯ ಮೇಲೆ ಕೋತಿ, ನಾಯಿಮರಿಯನ್ನು ಹಿಡಿದಿರುವಂತೆ ಹಂಚಿಕೊಂಡಿರುವ ಕ್ಲಿಪ್ ನೆಟಿಜನ್‌ಗಳ ಗಮನವನ್ನು ಸೆಳೆದಿದೆ.
ಪತ್ರಕರ್ತ ಮನೋಜ್ ಶರ್ಮಾ ಅವರು ಹಂಚಿಕೊಂಡ ತುಣುಕು ತ್ವರಿತವಾಗಿ ನೆಟ್ಟಿಗರ ಗಮನ ಸೆಳೆದಿದೆ. ಇದು ಕುಖ್ಯಾತ ‘ಗ್ಯಾಂಗ್ವಾರ್’ ಘಟನೆಯ ಪುನರಾವರ್ತನೆಯಾಗಬಹುದೇ ಎಂದು ಬಳಕೆದಾರರು ಊಹಿಸಿದ್ದಾರೆ. ಈ ಬಗ್ಗೆ ಬಗೆ ಬಗೆಯ ಮೀಮ್ ಗಳು ಹರಿದಾಡ್ತಿವೆ.