ನೋಯ್ಡಾ: ಬೈಕ್‌ನ ಚಕ್ರಗಳ ಮಧ್ಯೆ ಸಿಲುಕಿಕೊಂಡಿದ್ದ ಕೋತಿಯನ್ನು ಜನರ ಗುಂಪೊಂದು ರಕ್ಷಿಸಲು ಯತ್ನಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಬಾರಾಬಂಕಿಯ ಬಡೋಸರೈ ಪ್ರದೇಶದಲ್ಲಿ ಕೋತಿ ರಸ್ತೆ ದಾಟಲು ಯತ್ನಿಸುವ ವೇಳೆ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಸ್ತೆಯನ್ನು ದಾಟುವ ಪ್ರಯತ್ನದಲ್ಲಿ ವೇಗವಾಗಿ ಹೋಗಿದೆ. ಆ ಸಂದರ್ಭದಲ್ಲಿ ಅದು ಬೈಕ್ ಚಕ್ರಕ್ಕೆ ಸಿಲುಕಿಬಿಟ್ಟಿದೆ. ಈ ಸಂದರ್ಭದಲ್ಲಿ ಸವಾರ ಬೈಕ್ ಚಲಿಸುತ್ತಿದ್ದ. ಅದೃಷ್ಟವಶಾತ್ ಆತ ತಕ್ಷಣ ಬ್ರೇಕ್ ಹಾಕಿದ್ದಾನೆ. ಇದರಿಂದ ಆತನ ಪ್ರಾಣವೂ ಉಳಿದಿದೆ, ಜತೆಗೆ ಕೋತಿಯ ಪ್ರಾಣವೂ ಉಳಿದಿದೆ. ಆದರೆ ಕೋತಿ ಆಘಾತಕ್ಕೆ ಒಳಗಾಗಿತ್ತು. ಅಲ್ಪಸ್ವಲ್ಪ ಗಾಯಗಳಾಗಿದ್ದು, ಅದನ್ನು ಚಕ್ರದಿಂದ ತೆಗೆಯುವಲ್ಲಿ ಜನರು ಯಶಸ್ವಿಯಾಗಿದ್ದು, ಇಂಥದ್ದೊಂದು ಸತ್ಕಾರ್ಯ ಮಾಡಿದುದಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.