ಗೋಲ್ಗಪ್ಪಾ , ಪಾನಿಪುರಿಯನ್ನ ಇಷ್ಟಪಡದವರೇ ಇಲ್ಲ. ರಸ್ತೆಬದಿ ಮಾರಾಟದಿಂದ ಹಿಡಿದು ಸ್ಟಾರ್ ಹೋಟೆಲ್ ಗಳವರೆಗೆ ಈ ತಿಂಡಿ ಎಲ್ಲರಿಗೂ ಇಷ್ಟವಾಗುತ್ತೆ.
ಇದರ ರುಚಿಗೆ ಮನಸೋಲದವರಿಲ್ಲ. ಈ ತಿಂಡಿ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗೂ ರುಚಿಸಿದೆ. ವೈರಲ್ ವಿಡಿಯೋವೊಂದರಲ್ಲಿ ಕೋತಿಯೊಂದು ಗೋಲ್ಗಪ್ಪಾ ಸವಿಯುತ್ತಿದೆ.
ಗುಜರಾತ್‌ನ ಟಂಕರಾದಿಂದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗೊಲ್ಗಪ್ಪ ಮಾರಾಟಗಾರರ ಸ್ಟಾಲ್‌ಗೆ ಕೋತಿ ಬಂದು ಕುಳಿತಿದೆ.
ವ್ಯಕ್ತಿ ಗೋಲ್ಗಪ್ಪಾವನ್ನ ಕೋತಿಗೆ ತಿನ್ನಲು ನೀಡಿದ್ದಾರೆ. ಕೋತಿ ಗೊಲ್ಗಪ್ಪಾನ ಚಪ್ಪರಿಸಿ ತಿಂದಿದೆ. ಈ ರಂಜನೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಮಂದಿ ಸ್ಟಾಲ್ ಬಳಿ ಜಮಾಯಿಸಿದ್ದರು.