ಬೆಂಗಳೂರು: ಕಾರ್ಮಿಕ ಕಲ್ಯಾಣ ಯೋಜನೆಗಳ ಸಹಾಯಧನ ಮೊತ್ತ ಪರಿಷ್ಕರಣೆ ಮಾಡಲಾಗಿದೆ. ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ, ಮಕ್ಕಳ ಶೈಕ್ಷಣಿಕ ಪ್ರೋತ್ಸಾಹಧನ, ವೈದ್ಯಕೀಯ ನೆರವು ಮೊತ್ತ ಹೆಚ್ಚಳ ಮಾಡಲಾಗಿದೆ.
ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಜಾರಿಗೊಳಿಸುವ ಕಲ್ಯಾಣ ಯೋಜನೆಗಳ ಧನಸಹಾಯವನ್ನು ಪರಿಷ್ಕರಿಸಲಾಗಿದೆ. ಗಾರ್ಮೆಂಟ್, ಹೋಟೆಲ್ ಸೇರಿದಂತೆ 70ಕ್ಕೂ ಹೆಚ್ಚು ಅಧಿಸೂಚಿತ ಉದ್ಯೋಗಗಳಲ್ಲಿ ಸೇವಾ, ಉತ್ಪಾದನಾ ವಲಯದ ಕಾರ್ಖಾನೆ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನುಕೂಲವಾಗುತ್ತದೆ.
ವೈದ್ಯಕೀಯ ನೆರವು 25 ಸಾವಿರ ರೂ., ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ 10 ಸಾವಿರ ರೂ. ನೀಡಲಾಗುವುದು ವಿವಿಧ ಯೋಜನೆಯಡಿ ಧನ ಸಹಾಯ ಪಡೆಯಬಹುದಾಗಿದ್ದು ಮೊತ್ತವನ್ನು ಹೆಚ್ಚಿಸಲಾಗಿದೆ.