ಒಡಿಶಾದ ಪುರಿ ಜಿಲ್ಲೆಯ ನಿಮಾಪಾದ ಬ್ಲಾಕ್ನ ದೆಯುಲಿಯಾಥೆಂಗ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಇಟ್ಟಿದ್ದ ಹಣವು ಕುರುಹು ಇಲ್ಲದೆ ಮಾಯವಾಗುತ್ತಿರುವುದನ್ನು ನೋಡಿದ್ದಾರೆ. ದೆಯುಲಿಯಾಥೆಂಗ ಗ್ರಾಮದ ಜನರು ಇಂತಹ ಅದ್ಭುತ ಘಟನೆಗೆ ಸಾಕ್ಷಿಯಾಗಿದ್ದಾರೆ.
ದೆವುಲಿಯಾಥೆಂಗ ಗ್ರಾಮದ ಜನರು ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಭಯಭೀತರಾಗಿದ್ದಾರೆ. ತಮ್ಮ ಮನೆಗಳಲ್ಲಿ ವಿವಿಧ ಸ್ಥಳಗಳಲ್ಲಿ ಇಟ್ಟಿದ್ದ ಹಣವು ಸ್ವಯಂಚಾಲಿತವಾಗಿ ಮಾಯವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ವಿಶೇಷವಾಗಿ ಇಂತಹ ವಿದ್ಯಮಾನಗಳು ಬೆಳಿಗ್ಗೆ ಅಥವಾ ಸಂಜೆ ನಡೆಯುತ್ತಿವೆ.
ಇಂತಹ ಅಸಾಮಾನ್ಯ ಘಟನೆಗೆ ಸಾಕ್ಷಿಯಾಗಿ ಭಯಭೀತರಾದ ಗ್ರಾಮಸ್ಥರು ಈಗ ತಮ್ಮ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದಾರೆ. ತಮ್ಮ ಬೆಲೆಬಾಳುವ ವಸ್ತುಗಳನ್ನು ಸ್ನೇಹಿತರು ಮತ್ತು ಸಂಬಂಧಿಕರ ಮನೆಗಳಲ್ಲಿ ಇಡುತ್ತಿದ್ದಾರೆ.
ಅಗತ್ಯವಾದ ಹಣವನ್ನು ಮಹಿಳೆಯರು ತಮ್ಮ ಬಟ್ಟೆಗಳಲ್ಲಿ ಕಟ್ಟಿಕೊಳ್ಳುತ್ತಿರುವುದು ಕಂಡುಬಂದಿದೆ. ಹಣ/ ಕರೆನ್ಸಿ ನೋಟುಗಳು ನಿಜವಾಗಿಯೂ ಎಲ್ಲಿಗೆ ಹೋಗುತ್ತಿವೆ ಎಂದು ಗ್ರಾಮಸ್ಥರು ಚಿಂತಿತರಾಗಿದ್ದಾರೆ.
ಒಬ್ಬ ವ್ಯಕ್ತಿಯಲ್ಲ, ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕ ಗ್ರಾಮಸ್ಥರು ಇದೇ ವಿಷಯವನ್ನು ಹೇಳಿದ್ದಾರೆ. ಒಂದು ಪುಟ್ಟ ಹುಡುಗಿ, ಹಣವು ಅದ್ಭುತವಾಗಿ ಎತ್ತರಕ್ಕೆ ಏರಿ ನಂತರ ಕಣ್ಮರೆಯಾಗುವುದನ್ನು ಗಮನಿಸಿದೆ ಎಂದು ಹೇಳಿದ್ದಾಳೆ. ತನ್ನ ತಂದೆಯ ಸಲಹೆಯಂತೆ ಕರೆನ್ಸಿ ನೋಟಿನ ಮೇಲೆ ಕೀ ರಿಂಗ್ ಅನ್ನು ಹಾಕಿದ್ದಳು. ಆದರೂ, ನೋಟು ಹಾಗೂ ಕೀ ರಿಂಗ್ ಸ್ವಯಂಚಾಲಿತವಾಗಿ ಎತ್ತರಕ್ಕೆ ಏರಿ ನಂತರ ಹಣ ಮಾಯವಾಗುವುದನ್ನು ನೋಡಿದ್ದಾಳೆ.