ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದೆ. 9 ದಿನಗಳ ಕಾಲ ದುರ್ಗೆಯ 9 ಅವತಾರಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯಲ್ಲಿ ಕೆಲ ವಾಸ್ತು ನಿಯಮಗಳನ್ನು ಪಾಲನೆ ಮಾಡಿದ್ರೆ ತಾಯಿಯ ಕೃಪೆಗೆ ಪಾತ್ರರಾಗಬಹುದು.
ನವರಾತ್ರಿಯಲ್ಲಿ ತಾಯಿ ದುರ್ಗೆಗೆ ಲವಂಗವನ್ನು ಅರ್ಪಿಸುವುದ್ರಿಂದ ಸಾಕಷ್ಟು ಶುಭ ಫಲ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ. ತಾಯಿಗೆ ಜೋಡಿ ಲವಂಗವನ್ನು ಅರ್ಪಿಸುವುದರಿಂದ ಬಯಸಿದ ಆಸೆ ಈಡೇರುತ್ತದೆ. ಮನೆಯಲ್ಲಿ ಸುಖ, ಸಂತೋಷ ಪ್ರಾಪ್ತಿಯಾಗುತ್ತದೆ. ಲವಂಗದ ಉಪಾಯ ಬಳಸಿ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ.
ನಿಮ್ಮ ಮನೆಯಲ್ಲಿ ಸದಾ ಜಗಳವಾಗ್ತಿದ್ದರೆ, ದಾಂಪತ್ಯ ಜೀವನದಲ್ಲಿ ಸಮಸ್ಯೆ ಎದುರಾಗಿದ್ದರೆ ನೀವು ಲವಂಗದಿಂದ ಪರಿಹಾರ ಕಂಡುಕೊಳ್ಳಬಹುದು. ಒಂದು ಜೊತೆ ಲವಂಗವನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಮನೆಯ ಯಾವುದಾದ್ರೂ ಮೂಲೆಯಲ್ಲಿ ನೇತು ಹಾಕಬೇಕು ಎನ್ನುತ್ತದೆ ಶಾಸ್ತ್ರ. ಇದ್ರಿಂದ ನಿಮ್ಮ ಸಮಸ್ಯೆ ಕಡಿಮೆಯಾಗುತ್ತದೆ.
ಹಾಗೆಯೇ ಆರ್ಥಿಕ ಸಮಸ್ಯೆ ಕಾಡ್ತಿದೆ ಎನ್ನುವವರು ಲವಂಗವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಕಪಾಟಿನಲ್ಲಿ ಅಥವಾ ಹಣವಿಡುವ ಜಾಗದಲ್ಲಿ ಇಟ್ಟರೆ ಸಮಸ್ಯೆ ದೂರವಾಗುತ್ತದೆ. ಮನೆಯಲ್ಲಿ ಸಂಪತ್ತು ನೆಲೆ ನಿಲ್ಲುತ್ತದೆ.
ಸದಾ ಶತ್ರುಗಳ ಕಾಟವಿದೆ ಎನ್ನುವವರು ಲವಂಗವನ್ನು ಉಪಯೋಗಿಸಬೇಕು. ದೇವಿಯ ದೇವಸ್ಥಾನಕ್ಕೆ ಹೋಗಿ ಹಳದಿ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಬೇಕು. ಪೂಜೆ ಮಾಡುವ ವೇಳೆ ತಾಯಿಗೆ ಐದು ಲವಂಗವನ್ನು ಅರ್ಪಿಸಬೇಕು. ಇದ್ರಿಂದ ಶತ್ರುಗಳ ಕಾಟ ಕಡಿಮೆಯಾಗುತ್ತದೆ. ಅವರ ಷಡ್ಯಂತ್ರದಿಂದ ನೀವು ಮುಕ್ತಿ ಪಡೆಯಬಹುದು.
ವೃತ್ತಿ ಜೀವನದಲ್ಲಿ ಯಶಸ್ಸು ಸಿಗ್ತಿಲ್ಲ ಎನ್ನುವವರು ನಿಂಬೆ ಹಣ್ಣಿನ ಮೇಲೆ ನಾಲ್ಕು ಲವಂಗವನ್ನು ಇಟ್ಟು ಓಂ ಶ್ರೀ ಹನುಮಂತೇ ನಮಃ ಎಂಬ ಮಂತ್ರವನ್ನು ಜಪಿಸಬೇಕು. ಇದನ್ನು 21 ಬಾರಿ ಜಪಿಸಬೇಕು. ಇದ್ರಿಂದ ನಿಮಗೆ ಬಂದ ತೊಂದರೆ ನಿವಾರಣೆಯಾಗುತ್ತದೆ.