ಬೆಳಗಾವಿ: ಬಿಜೆಪಿಗೆ ಬರುವ ಮೊದಲು ನನಗೆ ಹಣದ ಆಫರ್ ನೀಡಲಾಗಿತ್ತು. ನಾನು ಕಾಂಗ್ರೆಸ್ ನಿಂದ ಬಿಜೆಪಿಗೆ ಬರುವುದಕ್ಕೆ ಹಣದ ಆಮಿಷವೊಡ್ಡಿದ್ದು ನಿಜ ಎಂದು ಆರೋಪ ಮಾಡಿದ್ದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಯೂಟರ್ನ್ ತೆಗೆದುಕೊಂಡಿದ್ದಾರೆ.
ಬಿಜೆಪಿಗೆ ಬರುವ ಮೊದಲು ನನಗೆ ಹಣದ ಆಫರ್ ನೀಡಲಾಗಿತ್ತು ಎಂದು ಹೇಳಿದ್ದ ಶ್ರೀಮಂತ ಪಾಟೀಲ್, ಬಿಜೆಪಿಯವರು ಯಾವುದೇ ಹಣದ ಆಫರ್ ನೀಡಿರಲಿಲ್ಲ ಎಂದು ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಅವರು ತಿಳಿಸಿದ್ದಾರೆ.
ಆಪರೇಷನ್ ಕಮಲದ ವೇಳೆ ಯಾರೂ ನನಗೆ ಹಣದ ಆಮಿಷ ನೀಡಿರಲಿಲ್ಲ. ನಾನು ಬಿಜೆಪಿಯ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೆ. ಏನು ಅಪೇಕ್ಷೆ ಇಟ್ಟುಕೊಂಡು ಬಿಜೆಪಿಗೆ ಬರುತ್ತೀರಿ ಎಂದು ಕೇಳಿದ್ದರು. ನನ್ನದು ಯಾವುದೇ ಅಪೇಕ್ಷೆ ಇಲ್ಲವೆಂದು ಅವರಿಗೆ ತಿಳಿಸಿದ್ದೆ. ಒಳ್ಳೆಯ ಸ್ಥಾನಮಾನ ನೀಡುವಂತೆ ಮಾತ್ರ ಕೇಳಿಕೊಂಡಿದ್ದೆ. ಪ್ರಧಾನಿ ಮೋದಿಯವರ ಕೆಲಸ ಮತ್ತು ಬಿಜೆಪಿಯ ವಿಚಾರಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದೆ ಎಂದು ಹೇಳುವ ಮೂಲಕ ಬಿಜೆಪಿಯ ಹಣದ ಆಫರ್ ಹೇಳಿಕೆ ಬಗ್ಗೆ ಶ್ರೀಮಂತ ಪಾಟೀಲ್ ಯೂಟರ್ನ್ ತೆಗೆದುಕೊಂಡಿದ್ದಾರೆ.
ಬಿಜೆಪಿಗೆ ಬರುವ ಮೊದಲು ನನಗೆ ಹಣದ ಆಫರ್ ನೀಡಲಾಗಿತ್ತು. ಆಪರೇಷನ್ ಕಮಲದ ವೇಳೆ ಆಮಿಷವೊಡ್ಡಲಾಗಿತ್ತು ಎಂದು ಅವರು ಹೇಳಿದ್ದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗಿತ್ತು.