alex Certify ಮಲ ಮಾರಾಟ ಮಾಡಿ ಸಂಪಾದಿಸಬಹುದು ಹಣ; ಅಮೆರಿಕಾ ಕಂಪನಿಯಿಂದ ವಿಚಿತ್ರ ಆಫರ್‌…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲ ಮಾರಾಟ ಮಾಡಿ ಸಂಪಾದಿಸಬಹುದು ಹಣ; ಅಮೆರಿಕಾ ಕಂಪನಿಯಿಂದ ವಿಚಿತ್ರ ಆಫರ್‌…..!

ಜೀವನದಲ್ಲಿ ಯಾರೂ ಕಂಡು ಕೇಳರಿಯದಂತಹ ಆಫರ್‌ ಒಂದನ್ನು ಅಮೆರಿಕದ ಕಂಪನಿ ಕೊಟ್ಟಿದೆ. ತಮಾಷೆ ಎನಿಸಿದ್ರೂ ಇದು ಸತ್ಯ.  ಅಮೆರಿಕದ ‘ಹ್ಯೂಮನ್ ಮೈಕ್ರೋಬ್ಸ್’ ಎಂಬ ಕಂಪನಿ, ಜನರ ಮಲವನ್ನು ಖರೀದಿಸಿ ಅದಕ್ಕೆ ಪ್ರತಿಯಾಗಿ ಭಾರೀ ಮೊತ್ತವನ್ನು ನೀಡುವುದಾಗಿ ಹೇಳಿದೆ.

ವಯಸ್ಸಿನಲ್ಲಿ ಚಿಕ್ಕವರಾಗಿದ್ದು ಆರೋಗ್ಯವಂತರಾಗಿದ್ದರೆ ಮತ್ತು ದೈಹಿಕವಾಗಿ ಸದೃಢರಾಗಿದ್ದರೆ ಅವರಿಂದ ಮಲವನ್ನು ಪಡೆಯಲು ಈ ಕಂಪನಿ ಬಯಸುತ್ತದೆ. ಒಂದು ಸ್ಟೂಲ್ ಸ್ಯಾಂಪಲ್‌ಗೆ ಅಂದರೆ ಮಲದ ಮಾದರಿಗೆ 500 ಡಾಲರ್ (ಸುಮಾರು 41 ಸಾವಿರ ರೂಪಾಯಿ) ನೀಡಲು ಈ ಕಂಪನಿ ಸಿದ್ಧವಿದೆ. ಪ್ರತಿದಿನ ಮಲ ದಾನ ಮಾಡಲು ಸಿದ್ಧರಿದ್ದರೆ, ಕಂಪನಿ ವರ್ಷಕ್ಕೆ 180,000 ಡಾಲರ್ ಅಂದರೆ ಸುಮಾರು 1.4 ಕೋಟಿ ರೂಪಾಯಿ ನೀಡುವುದಾಗಿ ಹೇಳಿಕೊಂಡಿದೆ.

ವ್ಯಕ್ತಿಯ ಜೀವ ಉಳಿಸುತ್ತದೆಯೇ ಮಲ ?

ಆರೋಗ್ಯವಂತ ವ್ಯಕ್ತಿಯ ಮಲದಲ್ಲಿ ಕಂಡುಬರುವ ಬ್ಯಾಕ್ಟೀರಿಯಾದ ಮಿಶ್ರಣವು ಅನಾರೋಗ್ಯ ಪೀಡಿತ ಜನರಿಗೆ, ವಿಶೇಷವಾಗಿ ಗಂಭೀರ ಕರುಳಿನ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿಯಾಗಿದೆ ಎಂದು ಈ ಕಂಪನಿ ಹೇಳಿಕೊಂಡಿದೆ. ಈ ಪ್ರಕ್ರಿಯೆಯನ್ನು ಫೆಕಲ್ ಮೈಕ್ರೋಬಯೋಟಾ ಟ್ರಾನ್ಸ್‌ಪ್ಲಾಂಟೇಶನ್ (ಎಫ್‌ಎಂಟಿ) ಎಂದು ಕರೆಯಲಾಗುತ್ತದೆ.

ಇದರಲ್ಲಿ ಆರೋಗ್ಯವಂತ ವ್ಯಕ್ತಿಯಿಂದ ಸಂಸ್ಕರಿಸಿದ ಮಲವನ್ನು ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯ ಕರುಳಿನಲ್ಲಿ ಸೇರಿಸಲಾಗುತ್ತದೆ. ಇದು ಕರುಳಿನ ಕಾಯಿಲೆಗಳನ್ನು ಗುಣಪಡಿಸುವುದು ಮಾತ್ರವಲ್ಲದೆ ಗಂಭೀರ ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆಯಂತೆ.

ಕಂಪನಿಯು ಪ್ರಸ್ತುತ ಹೆಚ್ಚಾಗಿ ಅಮೆರಿಕ ಮತ್ತು ಕೆನಡಾದ ಜನರಿಂದ ಮಲವನ್ನು ತೆಗೆದುಕೊಳ್ಳುತ್ತಿದೆ. ಆದರೆ ಜಗತ್ತಿನ ಯಾವ ಮೂಲೆಯಿಂದಲಾದರೂ ಡ್ರೈ ಐಸ್ ಜೊತೆಗೆ ಮಲವನ್ನು ಅವರಿಗೆ ಕಳುಹಿಸಬಹುದು ಎಂದು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಹ್ಯೂಮನ್ ಮೈಕ್ರೋಬ್ಸ್ ಅನ್ನು 2020 ರಲ್ಲಿ ಮೈಕೆಲ್ ಹ್ಯಾರೋಪ್ ಸ್ಥಾಪಿಸಿದರು. ಮಲದಿಂದ ಪಡೆದ ಬ್ಯಾಕ್ಟೀರಿಯಾದ ಅಧ್ಯಯನದ ಮೂಲಕ ಹೊಸ ಔಷಧಗಳನ್ನು ಅಭಿವೃದ್ಧಿಪಡಿಸುವುದು ಕಂಪನಿಯ ಗುರಿಯಾಗಿದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...