alex Certify ಹಿಪ್ ಹಾಪ್ ಸ್ಟೈಲ್ ನ ಏರೋಬಿಕ್ಸ್, ಶಿಲ್ಪಾಶೆಟ್ಟಿಯ ಹೊಸ ವರ್ಷದ ಹೊಸ ವರ್ಕೌಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಪ್ ಹಾಪ್ ಸ್ಟೈಲ್ ನ ಏರೋಬಿಕ್ಸ್, ಶಿಲ್ಪಾಶೆಟ್ಟಿಯ ಹೊಸ ವರ್ಷದ ಹೊಸ ವರ್ಕೌಟ್

Monday Motivation: Shilpa Shetty indulging in new hip hop style aerobics will get you motivated to hit the gym | PINKVILLAಹೊಸ ವರ್ಷದ ಆಚರಣೆಗಳು ಮುಗಿದು ಬಹುತೇಕ ಎಲ್ಲರೂ ತಮ್ಮ ಸಹಜ ಜೀವನಕ್ಕೆ ಮರಳಿದ್ದಾರೆ. ನಮ್ಮಲ್ಲಿ ಬಹಳಷ್ಟು ಜನರಿಗೆ ಅನೇಕ ವಿಷಯಗಳು ಬದಲಾಗಿರಬಹುದು ಆದರೆ ಶಿಲ್ಪಾ ಶೆಟ್ಟಿಗೆ, ಅವರ ಜೀವನದ ಅವಿಭಾಜ್ಯ ಅಂಗವಾಗಿ ಉಳಿಯುವ ಮತ್ತು ಬದಲಾಗದೆ ಇರುವ ಒಂದು ವಿಷಯವೆಂದರೆ ಫಿಟ್ನೆಸ್.

ಆಕೆ ಎಂತಹ ಫಿಟ್ನೆಸ್ ಫ್ರೀಕ್, ಅವರಿಗೆ ವರ್ಕ್ ಔಟ್ ಮಾಡುವುದು ಎಷ್ಟು ಇಷ್ಟ ಎಂದು ನಮ್ಮೆಲ್ಲರಿಗೂ ತಿಳಿದಿದೆ. ವರ್ಷದ ಮೊದಲ ಸೋಮವಾರವೇ ಶಿಲ್ಪಾ ಶೆಟ್ಟಿ ತನ್ನ ವರ್ಕೌಟ್ ವಿಡಿಯೋದೊಂದಿಗೆ ಅಭಿಮಾನಿಗಳಿಗೆ ಮಂಡೇ ಮೋಟಿವೇಷನ್ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್ ನಲ್ಲಿ, ಶಿಲ್ಪಾ ಶೆಟ್ಟಿ ತನ್ನ ಹೊಸ ವರ್ಕೌಟ್ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಹಿಪ್-ಹಾಪ್ ಶೈಲಿಯ ಏರೋಬಿಕ್ಸ್‌ನೊಂದಿಗೆ ಶಿಲ್ಪಾ‌ ತಮ್ಮ ವರ್ಷವನ್ನು ಪ್ರಾರಂಭಿಸಿದ್ದಾರೆ. ಮಂಡೇ ಮೋಟಿವೇಷನ್ ಗಾಗಿ , ಹೊಸ ವರ್ಷದ ವಾರಾಂತ್ಯದ ನಂತರ ಕೆಲವು ಹಿಪ್ ಹಾಪ್-ಶೈಲಿಯ ಏರೋಬಿಕ್ಸ್‌ನೊಂದಿಗೆ ದಿನವನ್ನು ಪ್ರಾರಂಭಿಸುವುದಕ್ಕಿಂತ ಉತ್ತಮ ಮಾರ್ಗವಿಲ್ಲ.

ಈ ವ್ಯಾಯಾಮ ಆರೋಗ್ಯವನ್ನು ಸುಧಾರಿಸುವುದು, ಕೊಬ್ಬನ್ನ ನಿಯಂತ್ರಿಸುತ್ತದೆ, ತೋಳು-ಕಾಲುಗಳ ಸಮನ್ವಯವನ್ನು ಸುಧಾರಿಸಲು ಸಹಾಯಕವಾಗಿದೆ. 45 ನಿಮಿಷಗಳ ವರ್ಕೌಟ್ ಸೆಶನ್‌ನಲ್ಲಿ, ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು. ಅಲ್ಲದೆ, ಈ ವರ್ಕೌಟ್ ಮೆದುಳನ್ನು ಚುರುಕುಗೊಳಿಸುತ್ತದೆ.

ಯಷ್ಮೀನ್ ಚೌಹಾಣ್ ಏರೋಬಿಕ್ಸ್ ನಲ್ಲಿ ಹಿಪ್ ಹಾಪ್ ಮರ್ಜ್ ಮಾಡಿ ಈ ಮೋಜಿನ‌ ವರ್ಕೌಟ್ ರಚಿಸಿದ್ದಾರೆ ಎಂದು ಮಾಹಿತಿ ನೀಡಿರುವ ಶಿಲ್ಪಾ, ಅಭಿಮಾನಿಗಳು ವರ್ಕೌಟ್ ಮಾಡಲು ಪ್ರೇರಣೆಯಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...