ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯುತ್ತಿರೋ ವೇಳೆ ಆಟಗಾರರಿಗಿಂತ ಕೆಲವೊಮ್ಮೆ ಪ್ರೇಕ್ಷಕರು ಹೆಚ್ಚು ಹೈಲೈಟ್ ಆಗಿ ಬಿಡ್ತಾರೆ. ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿರುವ ಪ್ರೇಕ್ಷಕರ ರಿಯಾಕ್ಷನ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಿಡುತ್ತವೆ.
ಬೇಸ್ಬಾಲ್ ಪಂದ್ಯಾವಳಿ ವೇಳೆಯಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡ್ತಿದೆ. ಲೆಕ್ಸಿ ವೈಟ್ಮೋರ್ ಎಂಬ ಹೆಸರಿನ ಮಹಿಳೆ ಚಿಕೋಗಾದ ಮೈದಾನದವೊಂದರಲ್ಲಿ ನಡೆಯುತ್ತಿದ್ದ ಪಂದ್ಯವನ್ನ ವೀಕ್ಷಿಸಲು ತನ್ನ ಮೂರು ತಿಂಗಳ ಕಂದಮ್ಮನೊಡನೆ ತೆರಳಿದ್ದಳು.
ಚೆಂಡು ಮೈದಾನದಿಂದ ಹಾರಿ ಈ ತಾಯಿಯ ಬಳಿಯೇ ಹೋಗಿದೆ. ಈಕೆ ಒಂದು ಕೈಯಲ್ಲಿ ಮೂರು ತಿಂಗಳ ಕಂದಮ್ಮನನ್ನ ಹಿಡಿದು ಇನ್ನೊಂದು ಕೈನಿಂದ ಚೆಂಡನ್ನ ಕ್ಯಾಚ್ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ಈ ಮೂಲಕ ಇಡೀ ಮೈದಾನದ ದೃಷ್ಟಿ ತನ್ನತ್ತ ಹರಿಯುವಂತೆ ಮಾಡಿದ್ದಾಳೆ ಈ ಸೂಪರ್ ಮದರ್…!
ಯುಟ್ಯೂಬ್ ಚಾನೆಲ್ ಎಂಎಲ್ಬಿಯಲ್ಲಿ ಈ ವಿಡಿಯೋವನ್ನ ಶೇರ್ ಮಾಡಲಾಗಿದ್ದು, ತಾಯಂದಿರು ಮಗುವನ್ನ ಕಂಕುಳಲ್ಲಿ ಹಿಡಿದುಕೊಂಡೇ ಏನೂ ಬೇಕಿದ್ದರೂ ಮಾಡಬಲ್ಲರು. ಅವರು ವಿಫಲ ಎಸೆತಕ್ಕೊಳಗಾದ ಚೆಂಡನ್ನೂ ಹಿಡಿಯಬಲ್ಲರು ಎಂದು ಶೀರ್ಷಿಕೆ ನೀಡಲಾಗಿದೆ.