
ತಾಯಿ ಮಗನ ಸಂಭಾಷಣೆಯ ಸ್ರ್ಕೀನ್ ಶಾಟ್ ಅನ್ನು ಜೇಸನ್ ಅಲೆನ್ ಎಂಬುವ ವರದಿಗಾರ ಹಂಚಿಕೊಂಡಿದ್ದು, ಶಾಲೆಯ ಆವರಣದಲ್ಲಿ ಗುಂಡಿನ ಸದ್ದು ಕೇಳಿದ ನಂತರ ವಿದ್ಯಾರ್ಥಿಗಳಲ್ಲಿನ ಭಯದ ವಾತಾವರಣ ಹೇಗಿತ್ತೆಂಬುದನ್ನು ತಾಯಿ ಮಗನ ಸಂಭಾಷಣೆ ಬಹಿರಂಗ ಮಾಡಿದೆ.
ಸ್ಟೆಲಾ ಒಗೊ ಮತ್ತು ಆಕೆಯ ಮಗ ಟೆರ್ವಿಕ್ ನಡುವಿನ ಸಂಭಾಷಣೆ ಇದಾಗಿದ್ದು, ಇದೇ ಕುಟುಂಬ ಕೆಲವು ವರ್ಷಗಳ ಹಿಂದೆ ಹಿಂಸಾಚಾರಕ್ಕೆ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡಿತ್ತು. ಹೀಗಾಗಿ ಶಾಲೆಯಲ್ಲಿ ಗುಂಡಿನ ಸದ್ದು, ಕುಟುಂಬವನ್ನು ಮತ್ತಷ್ಟು ಭಯ ಹುಟ್ಟಿಸಿತ್ತು.
ದೇಹದ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು ಹೀಗೆ ಮಾಡಿ
ಶಾಲೆ ಆರಂಭದ ಸಮಯ ಇರಬಹುದು ತಾಯಿಗೆ ಮಗನಿಂದ ಟೆಕ್ಸ್ಟ್ ಸಂದೇಶ ಬರುತ್ತದೆ, ಅಮ್ಮ, ಶೂಟಿಂಗ್ ನಡೆದಿದೆ. ಅಮ್ಮ,… ಸಹಾಯ… ಎಂದು ಮಗನ ಸಂದೇಶ ನೋಡುತ್ತಿದ್ದಂತೆ ಆಕೆ ಎಲ್ಲಿ? ಎಂದು ಪ್ರಶ್ನಿಸುತ್ತಾಳೆ. ಪ್ಲೀಸ್, ಸ್ಕೂಲ್, ಮಾಮ್ ಎಂದು ಆತ ಚುಟುಕಾಗಿ ಉತ್ತರಿಸುತ್ತಾನೆ.
ಪುನಃ ನೀನು ಸೇಫ್ ತಾನೆ, ಪೊಲೀಸರಿಗೆ ತಿಳಿಸುತ್ತೇನೆ ಎಂದು ಆಕೆ ರಿಪ್ಲೇ ಮಾಡುತ್ತಾಳೆ. ಬಳಿಕ ಪುನಃ ತಾನು ಭಯಭೀತನಾಗಿರುವುದಾಗಿ ಮಗ ತಾಯಿಗೆ ರಿಪ್ಲೇ ಮಾಡುತ್ತಾನೆ. ಈ ರೀತಿ ಆತಂಕದ ಚರ್ಚೆ ನಡೆಯುತ್ತದೆ.
ಈ ಚರ್ಚೆಯ ಭಾಗ ಸುದ್ದಿಯಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.