ಬಿಹಾರದ ಮಧುಬನಿ ಜಿಲ್ಲೆಯ ಲಲನ್, ಅನುದಿನ ಬಟ್ಟೆ ಒಗೆದು, ಇಸ್ತ್ರಿ ಮಾಡಿ, ಅವರವರ ಮನೆಗೆ ತಲುಪಿಸುತ್ತಾನೆ. ಹಾಗಂತ ಇವನು ಧೋಬಿಯಲ್ಲ. ಸ್ಥಳೀಯ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಕ್ಕೆ ನ್ಯಾಯಾಲಯದ ನ್ಯಾಯಾಧೀಶರು ಕೊಟ್ಟ ಶಿಕ್ಷೆ ಇದು.
ಕಳೆದ ಏಪ್ರಿಲ್ ತಿಂಗಳಲ್ಲಿ ಲಲನ್ ತನ್ನ ಹಳ್ಳಿಯ ಮಹಿಳೆಯ ಮೇಲೆ ಅತ್ಯಾಚಾರ ಎಸೆಯಲು ಪ್ರಯತ್ನಿಸಿದ್ದಾನೆ. ಆಕೆ ಸ್ಥಳೀಯ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ, ನಂತರ ಆತನನ್ನು ಕೂಡಲೇ ಬಂಧಿಸಿ, ಜೈಲಿಗೆ ಸೇರುವಂತೆ ಮಾಡಲಾಗಿತ್ತು.
ಸ್ವಲ್ಪ ದಿನಗಳ ನಂತರ ಈತ ಬೇಲ್ ಗೆ ಅರ್ಜಿ ಹಾಕಿದ್ದಾನೆ, ಇವನ ಒಳ್ಳೆ ನಡತೆ ಮತ್ತು ಕ್ಷಮೆ ಯಾಚಿಸಿದ ಕಾರಣ ಬೇಲ್ ನೀಡಲು ನ್ಯಾಯಾಧೀಶ ಅವಿನಾಶ್ ಕುಮಾರ್ ಒಪ್ಪಿದ್ದಾರೆ, ಆದರೆ ಅದು ಷರತ್ತು ಬದ್ದ ಜಾಮೀನಾಗಿತ್ತು.
ಅದೇನಪ್ಪ ಷರತ್ತು ಅಂದರೆ, ಈತ ಅನುದಿನವು ಬಟ್ಟೆ ಒಗೆದು, ಇಸ್ತ್ರಿ ಮಾಡಿ, ಆಯಾಯ ಮನೆಗೆ ಹಿಂದಿರುಗಿಸಿ ಕೊಡಬೇಕು. ಒಂದಲ್ಲ, ಎರಡಲ್ಲ, ಆರು ತಿಂಗಳು ಆತ ಇದನ್ನೇ ಮಾಡಬೇಕಿದೆ. ಒಟ್ಟು ಎರಡು ಸಾವಿರ ಬಟ್ಟೆಗಳನ್ನು ಒಗೆದು ಇಸ್ತ್ರಿ ಮಾಡಬೇಕಿದೆ.
ಕೋರ್ಟ್ ತರಾಟೆ ಬೆನ್ನಲ್ಲೇ ಕೋವಿಡ್ ಮರಣ ಪ್ರಮಾಣಪತ್ರದ ನಿಯಮಾವಳಿ ಬಿಡುಗಡೆ ಮಾಡಿದ ಕೇಂದ್ರ
ಈ ಹಳ್ಳಿಯ ಮುಖ್ಯಸ್ಥೆ ನಸೀಮಾ ಕಾಟೂನ್ ಅವರಿಗೆ ಇದರ ಉಸ್ತುವಾರಿ ವಹಿಸಿದ್ದು, ಲಲನ್ ಸೋಪು, ಸೋಪಿನ ಪುಡಿ ಮತ್ತು ಇಸ್ತ್ರಿಪೆಟ್ಟಿಗೆ ಕೊಂಡುಕೊಳ್ಳಬೇಕಿದೆ.
ಈ ಹಳ್ಳಿಯಲ್ಲಿ 425 ಮಂದಿ ಹೆಂಗಸರು ಇದ್ದಾರೆ, ಅವನು ಇವರ ಬಟ್ಟೆ ಒಗೆದು, ಇಸ್ತ್ರಿ ಮಾಡಲೇಬೇಕಿದೆ. ಉಸ್ತುವಾರಿ ವಹಿಸಿರುವ ನಸೀಮಾ, ಇದೊಂದು ಒಳ್ಳೆಯ ಸಂದೇಶ ಕೊಡಲಿದೆ, ತಪ್ಪು ಮಾಡುವವರಿಗೆ ಭಯ ಹುಟ್ಟಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಅವನು ಇದನ್ನು ಆರು ತಿಂಗಳು ಮಾಡಿ, ಸರ್ಟಿಫಿಕೇಟ್ ಪಡೆದು, ಕೋರ್ಟಿಗೆ ಹಾಜರುಪಡಿಸಬೇಕು.