ಸ್ಮಾಲ್ ಸ್ಕ್ರೀನ್ ನಟಿ ಅದಿತಿ ಹಾಗೂ ಮೋಹಿತ್ ಮಲ್ಲಿಕ್ ರವರ ಒಂಭತ್ತು ತಿಂಗಳ ಮಗು ಕೊರೋನಾ ಸೋಂಕಿಗೆ ತುತ್ತಾಗಿರುವ ಬಗ್ಗೆ ತಿಳಿದು ಬಂದಿದೆ. ಅಷ್ಟು ಪುಟ್ಟ ಮಗುವನ್ನು ಸಹ ಕೋವಿಡ್ ಬಿಡದೆ ಆವರಿಸಿತ್ತು. ಈ ಬಗ್ಗೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿರುವ ಅದಿತಿ, ನನ್ನ ಮಗ ಎಕ್ಬೀರ್ ಗೆ ಹುಟ್ಟಿದಾಗಿಂದಲು ಸಣ್ಣ ಜ್ವರ ಕಾಣಿಸಿಕೊಂಡಿರಲಿಲ್ಲ. ಆದರೆ ಒಂದು ದಿನ ಬೆಳಗ್ಗೆ ಎದ್ದ ಮೇಲೆ ಎಕ್ಬೀರ್ ದೇಹ ಬೆಚ್ಚಗಾಗಿತ್ತು. ಮನೆಯಲ್ಲೆ ತಾಪಮಾನ ಪರೀಕ್ಷಿ ಸಿದಾಗ 102 ಡಿಗ್ರಿ ಜ್ವರವಿತ್ತು. ತಕ್ಷಣ ಮನೆಯಲ್ಲಿದ್ದ ಎಲ್ಲರು ಕೊರೋನಾ ಟೆಸ್ಟ್ ಮಾಡಿಸಿದೆವು. ದುರದೃಷ್ಟವಶಾತ್ ಎಕ್ಬೀರ್ ಹಾಗೂ ಮನೆಯ ಕೆಲಸದವರೊಬ್ಬರಲ್ಲಿ ಸೋಂಕು ದೃಢವಾಯಿತು.
ಇಷ್ಟು ಪುಟ್ಟ ಮಗುವಿಗೆ ಹೇಗೆ ಸೋಂಕು ತಗುಲಿತು ಎಂದು ಭಯವಾದರು, ಆತಂಕ, ಆಘಾತ ಒಟ್ಟಿಗೆ ಕಾಣಿಸಿಕೊಂಡರು, ನನ್ನ ಮಗ ಸೋಂಕಿನ ವಿರುದ್ಧ ಹೋರಾಡುತ್ತಾನೆ ಎಂಬ ನಂಬಿಕೆ ಇತ್ತು. ನಮ್ಮ ಕುಟುಂಬ ಈ ಕಷ್ಟದಿಂದ ಬೇಗ ಚೇತರಿಸಿಕೊಳ್ಳುತ್ತದೆ, ಪುಟ್ಟ ಎಕ್ಬೀರ್ ಸೋಂಕಿನಿಂದ ಪಾರಾಗುತ್ತಾನೆ ಎಂದು ದೈರ್ಯದಿಂದ ಇದ್ದೆವು. ಈಗ ಎಕ್ಬೀರ್ ಸೋಂಕಿನಿಂದ ಪಾರಾಗಿದ್ದಾನೆ, ನಾವು ಇಷ್ಟು ದಿಮ ಹೋಮ್ ಕ್ವಾರಂಟೈನ್ ನಲ್ಲಿದ್ದೆವು. ಈಗ ನಮ್ಮ ದಿಗ್ಭಂದನ ಮುರಿದಿದೆ ಎಂದು ಅದಿತಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ವಾರ ನಟ ನಕುಲ್ ಮೆಹ್ತಾ ಅವರ ಹನ್ನೊಂದು ತಿಂಗಳ ಮಗುವಿಗು ಕೊರೋನಾ ಸೋಂಕು ತಗುಲಿತ್ತು. ಆ ಪುಟ್ಟ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು.