
ಪ್ರತಿ ದಿನ ಒಂದಿಲ್ಲೊಂದು ವಿಷ್ಯವನ್ನು ಪೋಸ್ಟ್ ಮಾಡಿವ ಹಸೀನ್, ಇನ್ಸ್ಟಾಗ್ರಾಮ್ನಲ್ಲಿ ಈಗ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಇದು ಜನರ ಕೋಪಕ್ಕೆ ಗುರಿಯಾಗಿದೆ. ಬೇರೆಯವರಿಂದ ಭಿಕ್ಷೆ ಬೇಡುವುದಕ್ಕಿಂತ ಸಾಯುವುದು ಲೇಸು ಎಂದು ಹಸೀನ್ ಪೋಸ್ಟ್ ಹಾಕಿದ್ದಾರೆ. ಇದು ಶಮಿ, ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಶಮಿ ಭಾಯ್ ಮೇಲೆ ಅಷ್ಟೊಂದು ಕೋಪವೇ ಎಂದು ಬಳಕೆದಾರನೊಬ್ಬ ಪ್ರಶ್ನೆ ಮಾಡಿದ್ದಾನೆ. ಇನ್ನೊಬ್ಬ, ಶಮಿಗೆ ಮೋಸ ಮಾಡಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ಶಮಿಗೆ ಮೋಸ ಮಾಡಿರುವ ನೀವು ಸಾಯುವುದು ಒಳ್ಳೆಯದು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
2018 ರಲ್ಲಿ, ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸಿನ್ ಜಹಾನ್ ಹಲ್ಲೆ, ಅತ್ಯಾಚಾರ, ಕೊಲೆ ಯತ್ನ ಮತ್ತು ಕೌಟುಂಬಿಕ ದೌರ್ಜನ್ಯದಂತಹ ಆರೋಪಗಳನ್ನು ಹೊರಿಸಿದ್ದರು. ಅವರ ವಿರುದ್ಧ ದೂರು ದಾಖಲಿಸಿದ್ದರು. ಮೊಹಮ್ಮದ್ ಶಮಿ ಮತ್ತು ಹಸೀನ್ ಮದುವೆ ಜೂನ್ 6, 2014 ರಂದು ನಡೆದಿತ್ತು. ಇಬ್ಬರೂ ವಿಚ್ಛೇದನ ಪಡೆದಿಲ್ಲ.