ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಟೀಮ್ ಇಂಡಿಯಾದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ ದಾಖಲೆ ಬರೆದಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಮೊಹಮ್ಮದ್ ಶಮಿ ಸಾಧನೆ ಮಾಡಿದ್ದಾರೆ.
ಟೆಸ್ಟ್ ಫೈನಲ್‌ನಲ್ಲಿ ಭಾರತ ಪರ 4 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ. ಮೊಹಮ್ಮದ್ ಶಮಿ ಈ ವಿಷಯದಲ್ಲಿ ಮೊಹಿಂದರ್ ಅಮರನಾಥ್, ಜಹೀರ್ ಖಾನ್, ಆರ್.ಪಿ. ಸಿಂಗ್ ಮತ್ತು ಇರ್ಫಾನ್ ಪಠಾಣ್ ಅವರಂತಹ ದಿಗ್ಗಜ ಆಟಗಾರರನ್ನು ಹಿಂದಿಕ್ಕಿದ್ದಾರೆ. 1983 ರ ವಿಶ್ವಕಪ್ ಫೈನಲ್ ನಲ್ಲಿ ಮೊಹಿಂದರ್ ಅಮರನಾಥ್ 12 ರನ್ ಗಳಿಗೆ 3 ವಿಕೆಟ್ ಪಡೆದಿದ್ದರು.
ಇದರ ನಂತರ 2007 ರ ಟಿ 20 ವಿಶ್ವಕಪ್ ಫೈನಲ್‌ನಲ್ಲಿ ಇರ್ಫಾನ್ ಪಠಾಣ್ 16 ರನ್‌ಗಳಿಗೆ 3 ವಿಕೆಟ್ ಪಡೆದಿದ್ದರು. 2007 ರ ಟಿ 20 ವಿಶ್ವಕಪ್ ಫೈನಲ್‌ನಲ್ಲಿ ಆರ್.ಪಿ. ಸಿಂಗ್ 26 ರನ್‌ಗಳಿಗೆ 3 ವಿಕೆಟ್ ಕಬಳಿಸಿ ದಾಖಲೆ ಮಾಡಿದ್ದರು. 2000 ರಲ್ಲಿ ನಡೆದ ಐಸಿಸಿ ಏಕದಿನ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ 27 ರನ್‌ಗಳಿಗೆ 3 ವಿಕೆಟ್ ಪಡೆದಿದ್ದರು. 2002 ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಹರ್ಭಜನ್ ಸಿಂಗ್ 27 ರನ್‌ಗಳಿಗೆ 3 ವಿಕೆಟ್ ಕಬಳಿಸಿದ್ದರು.