
ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ದಾಂಪತ್ಯ ಜೀವನ ಚೆನ್ನಾಗಿಲ್ಲ ಎನ್ನುವ ವಿಷ್ಯ ಎಲ್ಲರಿಗೂ ಗೊತ್ತು. ಶಮಿ ತಮ್ಮ ಮಗಳು ಮತ್ತು ಪತ್ನಿಯಿಂದ ದೂರ ಉಳಿದಿದ್ದಾರೆ. ಮಗಳಿಂದ ದೂರ ಇರುವ ಮೊಹಮ್ಮದ್ ಶಮಿ, ಮಗಳು ಮತ್ತು ಕುಟುಂಬವನ್ನು ಮಿಸ್ ಮಾಡಿಕೊಳ್ತಾರಂತೆ. ಸಂದರ್ಶನವೊಂದರಲ್ಲಿ ಮಾತನಾಡಿದ ಶಮಿ, ಮಗಳನ್ನು ನೆನೆದು ಸ್ವಲ್ಪ ಭಾವುಕರಾದರು. ಎಲ್ಲರೂ ಮಕ್ಕಳು ಮತ್ತು ಕುಟುಂಬವನ್ನು ನೆನಪು ಮಾಡಿಕೊಳ್ಳುತ್ತಾರೆ ಎಂದ ಅವರು, ಮಗಳನ್ನು ಭೇಟಿಯಾಗಿಲ್ಲ ಎಂದ್ರು.
ಸದ್ಯ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿರುವ ಶಮಿ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸಂದರ್ಶನದಲ್ಲಿ ಕೌಟುಂಬಿಕ ವಿಷ್ಯ ಮಾತನಾಡಿದ ಶಮಿ, ಕೆಲವೊಮ್ಮೆ ಅವರೊಂದಿಗೆ ಮಾತನಾಡುತ್ತೇನೆ ಎಂದರು. ಪತ್ನಿ ಹಸೀನ್ ಅವಕಾಶ ನೀಡಿದರೆ ನಾನು ಅವಳೊಂದಿಗೆ ಮಾತನಾಡುತ್ತೇನೆ. ಅದು ಹಸೀನ್ ನಿರ್ಧಾರದ ಮೇಲೆ ನಿಂತಿದೆ. ನಾನಿನ್ನೂ ಅವರ ಭೇಟಿ ಮಾಡಲು ಹೋಗಿಲ್ಲ ಎಂದಿದ್ದಾರೆ.
ನನ್ನ ಮತ್ತು ನನ್ನ ಮಗಳ ತಾಯಿ ಮಧ್ಯೆ ಏನೇ ನಡೆಯುತ್ತಿರಲಿ, ನನ್ನ ಮಗಳು ಆರೋಗ್ಯವಾಗಿ, ಸಂತೋಷದಿಂದ ಇರುವುದು ಮುಖ್ಯ. ನಾನು ಸದಾ ಇದನ್ನೇ ಬಯಸುತ್ತೇನೆ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.