ಕೊಮಿಲ್ಲಾ ವಿಕ್ಟೋರಿಯನ್ಸ್ ಮತ್ತು ಮಿನಿಸ್ಟರ್ ಗ್ರೂಪ್ ಢಾಕಾ ನಡುವಿನ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಈ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಶಹಜಾದ್ ಐಕಾನಿಕ್ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲೆ ಸಿಗರೇಟ್ ಸೇದುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ಈ ಬಗ್ಗೆ, ಮಿನಿಸ್ಟರ್ ಗ್ರೂಪ್ ಢಾಕಾ ತರಬೇತುದಾರ ಮಿಜಾನುರ್ ರೆಹಮಾನ್ ಶಹಜಾದ್‌ಗೆ ಎಚ್ಚರಿಕೆ ನೀಡಿದ್ದರು ಎಂದು ವರದಿಯಾಗಿದೆ. ಜೊತೆಗೆ ಹಿರಿಯ ಬ್ಯಾಟರ್ ತಮೀಮ್ ಇಕ್ಬಾಲ್ ಶಹಜಾದ್ ಅವರನ್ನು ಡ್ರೆಸ್ಸಿಂಗ್ ಕೋಣೆಗೆ ಹೋಗಲು ಹೇಳಿದರು ಎನ್ನಲಾಗಿದೆ.
BREAKING: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯ ಸ್ಥಿತಿ ಗಂಭೀರ
ಕ್ರೀಡಾಂಗಣದಲ್ಲೆ ಸಿಗರೇಟ್ ಸೇದಿರುವುದು ಆಟದ ಉತ್ಸಾಹಕ್ಕೆ ಅಥವಾ ಗೇಮ್ ಸ್ಪಿರಿಟ್ ಗೆ ವಿರುದ್ಧವಾದ ನಡವಳಿಕೆ. ಈ ಮೂಲಕ ಮೊಹಮ್ಮದ್, BCB ನೀತಿ ಸಂಹಿತೆಯ ಆರ್ಟಿಕಲ್ 2.20 ಅನ್ನು ಉಲ್ಲಂಘಿಸಿದ್ದಾರೆ. ಈ ಕಾರಣಕ್ಕಾಗಿ ಆಪ್ಘಾನ್ ನ ಸ್ಟಾರ್ ಕ್ರಿಕೆಟಿಗನಿಗೆ ದಂಡ ವಿಧಿಸಲು ಆಡಳಿತ ಮಂಡಳಿ ಸಿದ್ಧವಾಗಿದೆ. ಅವರ ಶಿಸ್ತಿನ ದಾಖಲೆಗೆ ಈಗಾಗಲೇ ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ. ಶಹಜಾದ್ ಅವರ ನಡವಳಿಕೆಗೆ ನೆಟ್ಟಿಗರು ಕಾಮೆಂಟ್ಸ್, ಮೀಮ್ಸ್ ಮತ್ತು ಟ್ರೋಲ್ಸ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ, ನಡೆಯುತ್ತಿರುವ ಬಿಪಿಎಲ್‌ನಲ್ಲಿ ಶಹಜಾದ್ ಉತ್ತಮ ಫಾರ್ಮ್‌ನಲ್ಲಿಲ್ಲ. ಏಳು ಪಂದ್ಯಗಳಲ್ಲಿ ಕೇವಲ 120 ರನ್ ಕಲೆಹಾಕಿದ್ದಾರೆ. ಢಾಕಾ ಮೂರು ಗೆಲುವು ಮತ್ತು ಮೂರು ಸೋಲುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕೊಮಿಲ್ಲಾ ವಿಕ್ಟೋರಿಯನ್ಸ್ ಆರು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿ ಉಳಿದಿದ್ದಾರೆ. ಏಳು ಪಂದ್ಯಗಳಲ್ಲಿ ಹೆಚ್ಚಿನ ಗೆಲುವುಗಳನ್ನು ಹೊಂದಿರುವ ಫಾರ್ಚೂನ್ ಬಾರಿಶಾಲ್ ನಂತರದ ಸ್ಥಾನದಲ್ಲಿದ್ದಾರೆ.
https://twitter.com/KingAbdulahIII/status/1489852372688031746?ref_src=twsrc%5Etfw%7Ctwcamp%5Etweetembed%7Ctwterm%5E1489852372688031746%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fsports%2Fmohammad-shahzads-picture-of-smoking-after-bpl-game-goes-viral-afghan-cricketer-faces-backlash-5223986%2F