ತಮಿಳುನಾಡು : ಪ್ರಧಾನಿ ಮೋದಿ ವಿರುದ್ಧ ಡಿಎಂಕೆ ವತಿಯಿಂದ ‘ಮೋದಿಜೀ ಪೇ’ ಪೋಸ್ಟರ್ ಆಂದೋಲನ ಆರಂಭಿಸಿದೆ.
ಡಿಎಂಕೆ ತನ್ನ ರಾಜಕೀಯ ಪ್ರತಿಸ್ಪರ್ಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ತಮಿಳುನಾಡಿನಾದ್ಯಂತ ಮೋದಿಯವರ ಮುಖವಿರುವ ‘ಜಿ ಪೇ’ ಪೋಸ್ಟರ್ ಗಳನ್ನು ಹಾಕಿದೆ.ಕ್ಯೂಆರ್ ಕೋಡ್ ಹೊಂದಿರುವ ಪೋಸ್ಟರ್ಗಳಲ್ಲಿ “ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಮೋದಿ ಮಾಡಿದ ವಂಚನೆಯನ್ನು ನೋಡಿ” ಎಂದು ಬರೆಯಲಾಗಿದೆ. ಸ್ಕ್ಯಾನ್ ನಂತರ, ಬಿಜೆಪಿ ವಿರುದ್ಧ ಡಿಎಂಕೆ ಆರೋಪಿಸಿರುವ ಚುನಾವಣಾ ಬಾಂಡ್ ಹಗರಣದ ವಿವರಗಳನ್ನು ಬಹಿರಂಗಪಡಿಸುವ ವೀಡಿಯೊ ಇದೆ.
ಬುಧವಾರ ವೆಲ್ಲೂರಿನಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತಾರೂಢ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ನಂತರ ಈ ಪೋಸ್ಟರ್ ಗಳು ಬಂದಿವೆ.ಡಿಎಂಕೆ ಭ್ರಷ್ಟಾಚಾರದಲ್ಲಿ ಏಕಸ್ವಾಮ್ಯ ಸಾಧಿಸುತ್ತಿದೆ ಮತ್ತು ಒಡೆದು ಆಳುವ ರಾಜಕೀಯದಲ್ಲಿ ತೊಡಗಿದೆ ಎಂದು ಮೋದಿ ಆರೋಪಿಸಿದರು. ಡಿಎಂಕೆ ಮತ್ತು ಅದರ ಮಿತ್ರ ಪಕ್ಷ ಕಾಂಗ್ರೆಸ್ ಜನರ ಕಲ್ಯಾಣಕ್ಕಿಂತ ಕುಟುಂಬ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದೆ ಎಂದು ಅವರು ಆರೋಪಿಸಿದರು.