ಚಿಕ್ಕಮಗಳೂರು : ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ, ಸದ್ಯದಲ್ಲೇ ಅವರ ಪಟ್ಟಾಭಿಷೇಕಾವನ್ನೂ ನೋಡುತ್ತೇವೆ ಎಂದು ಕೊಪ್ಪದ ಗೌರಿಗದ್ದ ಆಶ್ರಮದ ಅವಧೂತರಾದ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಮಾತನಾಡಿರುವ ವಿನಯ್ ಗುರೂಜಿ, ರಾಮನ ಪಟ್ಟಾಭಿಷೇಕ ಮುಗಿದಿದೆ. ಸದ್ಯದಲ್ಲೇ ಮೋದಿ ಪಟ್ಟಾಭಿಷೇಕವನ್ನೂ ನೋಡುತ್ತೇವೆ ಎನ್ನುವ ಮೂಲಕ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನು ತಮಿಳುನಾಡಿನಲ್ಲಿಅಣ್ಣಾಮಲೈ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರು ಮುಖ್ಯಮಂತ್ರಿ ಆಗುವುದನ್ನು ನಾವು ನೋಡುತ್ತೇವೆ. ನೀವು ನೋಡುತ್ತೀರ ಎಂದು ಹೇಳಿದ್ದಾರೆ.