ವರ್ಷದಿಂದ ವರ್ಷಕ್ಕೆ ಪ್ರಧಾನಿ ಮೋದಿ ಫ್ಯಾನ್ ಫಾಲೋವಿಂಗ್ ಹೆಚ್ಚಾಗ್ತಾ ಇದೆ ವಿನಃ ಕಡಿಮೆ ಆಗ್ತಿಲ್ಲ ಅದಕ್ಕೆ ಈಗ ಮತ್ತೆ ಸಾಕ್ಷಿಯಾಗಿದೆ ಜೈಸಲ್ಮೇರ್‌ನಲ್ಲಿರುವ ರಾಮನ ದೇವಸ್ಥಾನ. ಇಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಭಕ್ತರು ‘ಮೋದಿ ಮೋದಿ’ ಎಂದು ಘೋಷಣೆ ಕೂಗಿದ ಘಟನೆ ಈಗ ವೈರಲ್ ಆಗಿದೆ.
ಜೈಸಲ್ಮೇರ್‌ನಲ್ಲಿರುವ ರಾಮ ಮಂದಿರಕ್ಕೆ ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭೇಟಿ ನೀಡಿದ್ದಾಗ ನಡೆದ ಘಟನೆ ಇದು. ರಾಮ ಮಂದಿರಲ್ಲಿ ಸೇರಿದ್ದವರು ಮೋದಿ ಮೋದಿ ಎಂದು ಒಂದೇ ಸಮನೆ ಘೋಷಣೆ ಕೂಗಿದ್ದಾರೆ. ಇದರಿಂದಾಗಿ ಗೆಹ್ಲೋಟ್‍ಗೆ ಮುಜುಗರ ಎದುರಿಸುವ ಹಾಗಾಗಿದೆ. ಆದರೂ ತಮ್ಮನ್ನ ತಾವು ಸಂಭಾಳಿಸಿಕೊಂಡು ಜನರತ್ತ ಏನೂ ಆಗಿಲ್ಲ ಅನ್ನುವ ರೀತಿಯಲ್ಲಿ ಕೈಬೀಸುತ್ತಲೇ ಮುಂದೆ ಸಾಗಿದ್ದಾರೆ.
ಈ ವೀಡಿಯೋವನ್ನು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಯ್ಯ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರಾಮಮಂದಿರಕ್ಕೆ ಹೋಗಿದ್ದ ಅಶೋಕ್ ಗೆಹ್ಲೋಟ್ ಅವರನ್ನು ಪ್ರಧಾನ ಮಂತ್ರಿ ಅವರ ಹೆಸರಿನ ಘೋಷಣೆಯೊಂದಿಗೆ ಸ್ವಾಗತಿಸಲಾಯಿತು. ಭಕ್ತರು ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಯ್ಕೆ ತಿಳಿಸಿದ್ದು, ಆಗ ಗೆಹ್ಲೋಟ್ ಕೈಬೀಸುವ ಮೂಲಕ ಈ ಘೋಷಣೆಗಳನ್ನು ಸ್ವೀಕರಿಸಿದರು ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿನ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳು ಅರ್ಧಕ್ಕಿಂತ ಹೆಚ್ಚಾಗಿರೋದು ಇದು ಸುಳ್ಳು ಹಾಗೂ ಕಟ್ಟು ಕಥೆಗಳು ಎಂದು ಗೆಹ್ಲೋಟ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಅಲ್ಲಿನ ಜನರು ಗೆಹ್ಲೋಟ್ ಅವರನ್ನು ಬರಮಾಡಿಕೊಳ್ಳುವ ಸಂದರ್ಭದಲ್ಲಿ ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ.