ಹೈದರಾಬಾದ್: ತೆಲಂಗಾಣದ ಶಂಶಾಬಾದ್ ಜಿಲ್ಲೆ ಮುಚ್ಚಿಂತಲ್ ನಲ್ಲಿ ವಿಶ್ವದ ಎರಡನೇ ಅತಿದೊಡ್ಡ ರಾಮಾನುಜರ ಪ್ರತಿಮೆ 216 ಅಡಿ ಎತ್ತರದ ಸಮಾನತಾ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ.
ಲೋಕಾರ್ಪಣೆಯ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಚಿನ್ನಜೀಯರ್ ಸ್ವಾಮೀಜಿ ಅವರ ಮಹತ್ವಾಕಾಂಕ್ಷಿ ಯೋಜನೆ ಇಂದು ಸಾಕಾರಗೊಂಡಿದೆ. ರಾಮಾನುಜರ ಜನ್ಮಶತಮಾನೋತ್ಸವದ ಸ್ಮರಣಾರ್ಥವಾಗಿ 216 ಅಡಿ ಎತ್ತರದ ಸಮಾನತಾ ಪ್ರತಿಮೆ ನಿರ್ಮಾಣ ಮಾಡಿದ್ದು, ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ ಎಂದು ಹೇಳಿದ್ದಾರೆ.
ವಸಂತ ಪಂಚಮಿ ದಿನ ಪ್ರತಿಮೆ ಅನಾವರಣಗೊಳಿಸಿರುವುದು ಸಂತೋಷ ತಂದಿದೆ. ಗುರುವಿನಿಂದ ನಮಗೆ ಜ್ಞಾನ ಸಿಗುತ್ತದೆ. ಶಾರದಾಮಾತೆ ಕೃಪೆಯಲ್ಲಿ ರಾಮಾನುಜರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಜಗದ್ಗುರು ರಾಮಾನುಜಾಚಾರ್ಯರ ಜ್ಞಾನ ವಿಶ್ವಕ್ಕೆ ಜ್ಞಾನ ಪಥ ಆಗಿದೆ. ಗುರು ಮಾಧ್ಯಮ ಮೂಲಕವೇ ನಮಗೆಲ್ಲ ಜ್ಞಾನ ಪ್ರಸರಣ ಆಗುತ್ತದೆ ಎಂದಿದ್ದಾರೆ.