ಕರ್ನಾಟಕದ ಬಳಿಕ ರಾಜಸ್ತಾನದಲ್ಲಿ ಮತ ಗಳಿಕೆಗೆ ಬಿಜೆಪಿ ತಂತ್ರ; ಪ್ರಧಾನಿ ಮೋದಿಯಿಂದ ಭರ್ಜರಿ ರೋಡ್ ಶೋ 11-05-2023 5:51AM IST / No Comments / Posted In: India, Featured News, Live News ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯ ನಾಥದ್ವಾರ ಪಟ್ಟಣದ ಶ್ರೀನಾಥ್‌ಜಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥನೆ ಸಲ್ಲಿಸಿದರು. ದೇವಾಲಯದ ಮಾರ್ಗದಲ್ಲಿ ಜನರು ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು ಮತ್ತು ಪ್ರಧಾನ ಮಂತ್ರಿಯವರ ಕಾರಿನ ಮೇಲೆ ಪುಷ್ಪವೃಷ್ಟಿ ಸುರಿಸಿದರು. ಜನರು ಹೂಮಳೆ ಸುರಿಸುತ್ತಿದ್ದಂತೆ ಪ್ರಧಾನಿ ಮೋದಿಯವರು ತಮ್ಮ ಕಾರಿನಿಂದ ಜನರತ್ತ ಕೈ ಬೀಸಿದರು. 5,500 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ಮೋದಿ ಕಾಂಗ್ರೆಸ್ ಆಡಳಿತದ ರಾಜಸ್ತಾನಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಮಂತ್ರಿಯವರು ಪ್ರಾರಂಭಿಸುವ ಯೋಜನೆಗಳು ಈ ಪ್ರದೇಶದಲ್ಲಿ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಹೆಚ್ಚಿಸುತ್ತವೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಹೇಳಿದೆ. ಯೋಜನೆಗಳ ಪೈಕಿ, ರಾಜ್‌ಸಮಂದ್ ಮತ್ತು ಉದಯಪುರದಲ್ಲಿ ರಸ್ತೆಯನ್ನು ದ್ವಿಪಥಕ್ಕೆ ಮೇಲ್ದರ್ಜೆಗೇರಿಸಲು ಮತ್ತು ಉದಯಪುರ ರೈಲು ನಿಲ್ದಾಣದ ಪುನರಾಭಿವೃದ್ಧಿಗಾಗಿ ಮೋದಿ ಶಂಕುಸ್ಥಾಪನೆ ಮಾಡಲಿದ್ದಾರೆ. ಮತ್ತು 114-ಕಿಮೀ ಉದ್ದದ ಆರು ಲೇನ್ ಸೇರಿದಂತೆ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಇದಲ್ಲದೆ ಅವರು ಧಾರ್ಮಿಕ ಸಂಘಟನೆಯಾದ ಬ್ರಹ್ಮಕುಮಾರೀಸ್‌ನ ಶಾಂತಿವನ ಸಂಕೀರ್ಣಕ್ಕೂ ಭೇಟಿ ನೀಡಿದ್ದಾರೆ. ಸೂಪರ್ ಸ್ಪೆಷಾಲಿಟಿ ಚಾರಿಟೇಬಲ್ ಗ್ಲೋಬಲ್ ಆಸ್ಪತ್ರೆ, ಎರಡನೇ ಹಂತದ ಶಿವಮಣಿ ವೃದ್ಧಾಶ್ರಮ ಮತ್ತು ನರ್ಸಿಂಗ್ ಕಾಲೇಜು ವಿಸ್ತರಣೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಪ್ರಧಾನಮಂತ್ರಿಯವರು ಅಬು ರೋಡ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಚಾರಿಟೇಬಲ್ ಗ್ಲೋಬಲ್ ಆಸ್ಪತ್ರೆ, ಶಿವಮಣಿ ವೃದ್ಧಾಶ್ರಮದ ಎರಡನೇ ಹಂತ ಮತ್ತು ನರ್ಸಿಂಗ್ ಕಾಲೇಜು ವಿಸ್ತರಣೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ವರ್ಷ ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿರುವ ರಾಜಸ್ತಾನ ವಿಧಾನಸಭೆ ಚುನಾವಣೆಗೆ ತಿಂಗಳುಗಳ ಮುಂಚೆಯೇ ಕಾಂಗ್ರೆಸ್ ಆಡಳಿತದ ರಾಜ್ಯಕ್ಕೆ ಕೇಂದ್ರ ಸರ್ಕಾರ ಮಹತ್ತರ ಯೋಜನೆಗಳ ಮೂಲಕ ಮತ ಗಳಿಕೆಗೆ ಮುಂದಾಗಿದೆ. 2019ರ ವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಈ ಬಾರಿಯೂ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದೆ. VIDEO | PM Modi holds roadshow in Nathdwara, Rajasthan. pic.twitter.com/sbQT1baWhF — Press Trust of India (@PTI_News) May 10, 2023 #WATCH | Shrinathji Temple officials felicitates PM Narendra Modi as he visits the temple in Nathdwara, Rajasthan. pic.twitter.com/vCvAZUWgmE — ANI (@ANI) May 10, 2023