ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವವರಿಗೊಂದು ಖುಷಿ ಸುದ್ದಿಯಿದೆ. ಮೋದಿ ಸರ್ಕಾರದಿಂದ 3 ಕೋಟಿ ನಗದು ಬಹುಮಾನ ಪಡೆಯುವ ಅವಕಾಶ ನಿಮಗೆ ಸಿಗ್ತಿದೆ. ಮೋದಿ ಸರ್ಕಾರ, ದೇಶಾದ್ಯಂತ ಶಾಲಾ ವಿದ್ಯಾರ್ಥಿಗಳಿಗೆ `ವಿಶ್ವ ದರ್ಜೆಯ ಆನ್‌ಲೈನ್ ಮತ್ತು ಪ್ರಸಾರ’ ಕಾರ್ಯಕ್ರಮ `ಫಿಟ್ ಇಂಡಿಯಾ ಕ್ವಿಜ್’ನಡೆಸಲು ಮುಂದಾಗಿದೆ. ಇದರ ನೋಂದಣಿ ಮುಂದಿನ ತಿಂಗಳು ಆರಂಭವಾಗಲಿದೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ಕ್ರೀಡೆ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸ್ಪರ್ಧೆಯಲ್ಲಿ ಹಣ ಗೆಲ್ಲಬಹುದು. ದೇಶದ ಪ್ರತಿ ಶಾಲೆಯು ಎರಡಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ನಾಮನಿರ್ದೇಶನ ಮಾಡಬಹುದು. ಮೊದಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ, ಆನ್‌ಲೈನ್ ವೇದಿಕೆಯಲ್ಲಿ ಸ್ಪರ್ಧೆ ನಡೆಯುತ್ತದೆ. ನಂತರ ಪ್ರತಿ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಿಂದ 32 ಶಾಲೆಗಳನ್ನು ಸ್ಟೇಟ್ ಲೆವಲ್ ಗೆ ಆಯ್ಕೆ ಮಾಡಲಾಗುವುದು. ನಂತ್ರ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ಒಬ್ಬ ಚಾಂಪಿಯನ್ ಆಯ್ಕೆ ನಡೆಯಲಿದೆ. ನಂತ್ರ ವಿಜೇತ ಶಾಲಾ ತಂಡಗಳು ರಾಷ್ಟ್ರ ಮಟ್ಟಕ್ಕೆ ಪ್ರವೇಶ ಪಡೆಯಲಿವೆ. ಕ್ವಾರ್ಟರ್ ಫೈನಲ್, ಸೆಮಿ-ಫೈನಲ್ ಮತ್ತು ಫೈನಲ್ ರೌಂಡ್ ನಡೆಯಲಿದೆ. ಇದನ್ನು ಪ್ರಮುಖ ಖಾಸಗಿ ಕ್ರೀಡಾ ಚಾನೆಲ್ ಮತ್ತು ರಾಷ್ಟ್ರೀಯ ದೂರದರ್ಶನ ಚಾನೆಲ್ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ, ಸಚಿವಾಲಯ ಪ್ರಸಾರ ಮಾಡಲಿದೆ.
ಭಾರತೀಯ ಕ್ರೀಡೆಗಳ ಇತಿಹಾಸ, ಸಾಂಪ್ರದಾಯಿಕ ಕ್ರೀಡೆಗಳು, ಯೋಗ ವ್ಯಕ್ತಿತ್ವ, ಫಿಟ್ನೆಸ್ ವಿಷಯಗಳು, ಒಲಿಂಪಿಕ್ಸ್, ಕಾಮನ್ವೆಲ್ತ್ ಆಟಗಳು, ಏಷ್ಯನ್ ಆಟಗಳು, ಖೇಲೋ ಇಂಡಿಯಾ ಆಟಗಳು ಮತ್ತು ಇತರ ಜನಪ್ರಿಯ ಆಟಗಳ ಮೇಲೆ ಪ್ರಶ್ನೆಯಿರುತ್ತದೆ.