ನಿರುದ್ಯೋಗಿ ಯುವಕರಿಗೆ ಮಾಸಿಕ 3,500 ರೂ.ಗಳ ಭತ್ಯೆಯನ್ನು ಕೇಂದ್ರ ಸರ್ಕಾರ ಕೊಡುತ್ತಿದೆ ಎಂದು ಹೇಳಲಾದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಧಾನ ಮಂತ್ರಿ ಬೆರೋಜ್ಗಾರ್ ಭತ್ತಾ ಯೋಜನೆಯಡಿ ಹೀಗೆ ಮಾಡಲಾಗುತ್ತಿದೆ ಎಂದು ಹೇಳಲಾದ ಈ ಸುಳ್ಳು ಸುದ್ದಿಯನ್ನು ಅಲ್ಲಗಳೆದಿರುವ ಮಾಧ್ಯಮ ಮಾಹಿತಿ ಬ್ಯೂರೋ (ಪಿಐಬಿ) ಈ ಸುದ್ದಿ ಸುಳ್ಳೆಂದು ಟ್ವೀಟ್ ಮಾಡಿದೆ.
ರೇಷನ್ ಕಾರ್ಡ್ ಇದ್ದೂ ಆಹಾರ ಧಾನ್ಯ ಪಡೆದಿಲ್ವಾ…..? ಹಾಗಾದ್ರೆ ರದ್ದಾಗುತ್ತೆ ಪಡಿತರ ಚೀಟಿ
ಇಂಥ ಯಾವುದೇ ಯೋಜನೆಯನ್ನ ಭಾರತ ಸರ್ಕಾರ ಕೈಗೊಂಡಿಲ್ಲವೆಂದು ಸ್ಪಷ್ಟಪಡಿಸಿರುವ ಪಿಐಬಿ, ಇದೊಂದು ವಂಚನೆಯ ಯತ್ನವಾಗಿದ್ದು ಅನುಮಾನಾಸ್ಪದವಾದ ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡದಂತೆ ಕೋರಿದೆ.
ಒಂದು ವೇಳೆ ನಿಮಗೆ ಅನುಮಾನ ಬಂದಲ್ಲಿ, ನೀವು ನೋಡಿದ ಸುದ್ದಿಯ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿಕೊಳ್ಳಲು https://factcheck.pib.gov.in.ಗೆ ಭೇಟಿ ನೀಡಬಹುದು. ಇಲ್ಲವಾದಲ್ಲಿ +918799711259ಗೆ ವಾಟ್ಸಾಪ್ ಸಂದೇಶ ಕಳುಹಿಸಿ ನೋಡಬಹುದು. pibfactcheck@gmail.com ವಿಳಾಸಕ್ಕೆ ಇ-ಮೇಲ್ ಸಹ ಮಾಡಬಹುದಾಗಿದೆ.