ಹೆಣ್ಣು ಮಕ್ಕಳಿಗಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಶಿಕ್ಷಣ, ವಿವಾಹ ಸೇರಿದಂತೆ ಎಲ್ಲ ಸಂದರ್ಭದಲ್ಲಿ ಆರ್ಥಿಕ ನೆರವು ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಶುರು ಮಾಡಿದೆ.
ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನ ಮಂತ್ರಿ ಕನ್ಯಾ ಆಶೀರ್ವಾದ್ ಯೋಜನೆ ಅಡಿಯಲ್ಲಿ ಹೆಣ್ಣು ಮಕ್ಕಳಿಗೆ 2000 ರೂಪಾಯಿಗಳನ್ನು ನೀಡಲಾಗ್ತಿದೆ ಎಂಬ ಸುದ್ದಿಯೊಂದು ಹರಿದಾಡ್ತಿದೆ.
ಪ್ರಧಾನ ಮಂತ್ರಿ ಕನ್ಯಾ ಆಶೀರ್ವಾದ್ ಯೋಜನೆ ಅಡಿಯಲ್ಲಿ, ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ಹೆಣ್ಣು ಮಕ್ಕಳಿಗೆ 2 ಸಾವಿರ ರೂಪಾಯಿ ನೀಡುತ್ತಿದೆ ಎಂಬ ಸುದ್ದಿ ಹರಿದಾಡ್ತಿದೆ. ಹೆಣ್ಣು ಮಕ್ಕಳ ಖಾತೆಗೆ ಹಣ ವರ್ಗಾವಣೆ ಮಾಡಲಾಗ್ತಿದೆ ಎಂದು ಯುಟ್ಯೂಬ್ ಚಾನೆಲ್ ಒಂದು ಸುದ್ದಿ ಬಿತ್ತರಿಸಿದೆ.
ಈ ಸುದ್ದಿ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ಮಾಡಿದೆ. ಇದು ಸುಳ್ಳು ಸುದ್ದಿ ಎಂದು ಪಿಐಬಿ ಹೇಳಿದೆ. ಸರ್ಕಾರ ಅಂತಹ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ. ಈ ಸುದ್ದಿ ಸಂಪೂರ್ಣವಾಗಿ ಸುಳ್ಳು ಎಂದು ಪಿಐಬಿ ಹೇಳಿದೆ.
ಒಂದು ವೇಳೆ ಇಂಥ ಸುದ್ದಿಗಳು ನಿಮ್ಮ ಕಣ್ಣಿಗೆ ಬಿದ್ರೆ ನೀವು ಕೂಡ https://factcheck.pib.gov.in/ ಅಥವಾ whatsapp ಸಂಖ್ಯೆ +918799711259 ಅಥವಾ ಇಮೇಲ್: pibfactcheck@gmail.com. ಗೆ ಮಾಹಿತಿ ನೀಡಬಹುದು.