ನವದೆಹಲಿ: ಯುಪಿಎ ಸರ್ಕಾರದ ಆರ್ಥಿಕ ದುರಾಡಳಿತದ ಬಗ್ಗೆ ಮೋದಿ ಸರ್ಕಾರ ‘ಶ್ವೇತಪತ್ರ’ ಹೊರಡಿಸಲಿದೆ. ಇದೇ ಕಾರಣಕ್ಕೆ ಸಂಸತ್ ಅಧಿವೇಶನವನ್ನು ಒಂದು ದಿನ ವಿಸ್ತರಿಸಲಾಗಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಆರ್ಥಿಕ ದುರುಪಯೋಗದ ಶ್ವೇತಪತ್ರ ಹೊರ ತರುವ ಮೂಲಕ ಭಾರತದ ಆರ್ಥಿಕ ದುಃಸ್ಥಿತಿ ಮತ್ತು ಆರ್ಥಿಕತೆಯ ಮೇಲೆ ಅದರ ಋಣಾತ್ಮಕ ಪರಿಣಾಮಗಳ ಕುರಿತು ಮಾಹಿತಿ ನೀಡಲಾಗುವುದು. ಆ ಸಮಯದಲ್ಲಿ ತೆಗೆದುಕೊಳ್ಳಬಹುದಾದ ಸಕಾರಾತ್ಮಕ ಕ್ರಮಗಳ ಪ್ರಭಾವದ ಬಗ್ಗೆಯೂ ಮಾಹಿತಿ ಇರಲಿದೆ ಎಂದು ಹೇಳಲಾಗಿದೆ.