alex Certify BIG NEWS: ಡಿಎಲ್, ಪಾಸ್ಪೋರ್ಟ್, ಆಧಾರ್ ಕಾರ್ಡ್ ಪಡೆಯಲು ಮಧ್ಯವರ್ತಿಗಳ ಅವಶ್ಯಕತೆಯಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡಿಎಲ್, ಪಾಸ್ಪೋರ್ಟ್, ಆಧಾರ್ ಕಾರ್ಡ್ ಪಡೆಯಲು ಮಧ್ಯವರ್ತಿಗಳ ಅವಶ್ಯಕತೆಯಿಲ್ಲ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಚಾಲನಾ ಪರವಾನಗಿ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಬಹುತೇಕ ಆನ್‌ಲೈನ್‌ ಮಾಡಿದೆ. ಕೊರೊನಾ ಸಮಯದಲ್ಲಿ ಆರ್‌ಟಿಒದ ಹೆಚ್ಚಿನ ಸೇವೆಗಳನ್ನು ಈಗಾಗಲೇ ಆನ್‌ಲೈನ್‌ನಲ್ಲಿ ನೀಡ್ತಿದೆ. ಆದ್ರೆ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಜನರಿಗೆ ಚಾಲನಾ ಪರವಾನಗಿ, ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಸೇರಿದಂತೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳ ಯೋಜನೆಗಳ ಲಾಭ ಪಡೆಯಲು ಕಷ್ಟವಾಗುತ್ತಿದೆ.

ಈ ಯೋಜನೆಗಳ ಲಾಭ ಪಡೆಯಲು, ಜನರು ಜಿಲ್ಲಾ ಕೇಂದ್ರಕ್ಕೆ ಬರಬೇಕಾಗುತ್ತದೆ. ದಲ್ಲಾಳಿಗಳ ಗಾಳಕ್ಕೆ ಸಿಲುಕಬೇಕಾಗುತ್ತದೆ. ಆದ್ರೆ ಇನ್ಮುಂದೆ ಈ ತೊಂದರೆ ಇರುವುದಿಲ್ಲ.

ಪಂಚಾಯತ್ ಕಟ್ಟಡಗಳಲ್ಲಿ, ಸಾರ್ವಜನಿಕ ಅನುಕೂಲ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಯುಪಿ, ಬಿಹಾರ, ಮಧ್ಯಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದನ್ನು ಶುರು ಮಾಡಲಾಗ್ತಿದೆ. ಸೇವಾ ಕೇಂದ್ರದಲ್ಲಿ ಚಾಲನಾ ಪರವಾನಗಿ, ಪಿಎಂ ಆವಾಸ್ ಯೋಜನೆ, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಕಡಿಮೆ ಶುಲ್ಕದಲ್ಲಿ ಈ ಸೇವೆ ಲಭ್ಯವಾಗಲಿದೆ.

ವಾಹನಕ್ಕೆ ಸಂಬಂಧಿಸಿದ ಯಾವುದೇ ಅರ್ಜಿಯನ್ನು ಸಾರ್ವಜನಿಕ ಅನುಕೂಲ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಅಥವಾ ಸ್ಲಾಟ್ ಕಾಯ್ದಿರಿಸಲು ಬಯಸಿದರೆ ಜನ ಸುವಿದಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪರವಾನಗಿ ನವೀಕರಣ, ನಕಲಿ ಪರವಾನಗಿ, ವಿಳಾಸ ಬದಲಾವಣೆ ಮತ್ತು ಆರ್‌ಸಿ ಮಾಡಲು ಜನರು, ಜಿಲ್ಲಾ ಕೇಂದ್ರಕ್ಕೆ ಬರಬೇಕಾಗಿಲ್ಲ. ಮನೆಯಲ್ಲಿ ಕುಳಿತುಕೊಂಡು ಈ ದಾಖಲೆಗಳನ್ನು ಆನ್ಲೈನ್ ನಲ್ಲಿ ಅಪ್‌ಲೋಡ್ ಮಾಡಬಹುದು. ಚಾಲನಾ ಪರೀಕ್ಷೆ ಮತ್ತು ಫಿಟ್‌ನೆಸ್‌ಗಾಗಿ ಮಾತ್ರ ಆರ್‌ಟಿಒಗೆ ಬರಬೇಕಾಗುತ್ತದೆ.

ಕೇಂದ್ರ ಸರ್ಕಾರದ ಸೂಚನೆಯ ನಂತರ ಯುಪಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಕೆಲಸ ವೇಗವಾಗಿ ಪ್ರಾರಂಭವಾಗಿದೆ. ಯುಪಿಯ ಎಲ್ಲಾ ಜಿಲ್ಲೆಗಳ ಗ್ರಾಮ ಪಂಚಾಯಿತಿ ಕಟ್ಟಡಗಳಲ್ಲಿ ಜನ ಸುವಿಧಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...