ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರ ಸ್ವಯಂ ನಿವೃತ್ತಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ (DoP&PW) ಕಚೇರಿಯ ಸುತ್ತೋಲೆ ಪ್ರಕಾರ, 20 ವರ್ಷಗಳ ನಿಯಮಿತ ಸೇವೆಯನ್ನು ಪೂರ್ಣಗೊಳಿಸಿದ ನೌಕರರು ನೇಮಕಾತಿ ಪ್ರಾಧಿಕಾರಕ್ಕೆ ಮೂರು ತಿಂಗಳ ನೋಟಿಸ್ ನೀಡುವ ಮೂಲಕ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಜ್ಞಾಪಕ ಪತ್ರವನ್ನು 11 ಅಕ್ಟೋಬರ್ 2024 ರಂದು ನೀಡಲಾಗಿದ್ದು, ಹೊಸ ನಿಯಮಗಳ ಪ್ರಕಾರ, ಉದ್ಯೋಗಿಯು 20 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದರೆ, ಅವರು ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಬಹುದು. ನೇಮಕಾತಿ ಪ್ರಾಧಿಕಾರವು ಅರ್ಜಿಯನ್ನು ತಿರಸ್ಕರಿಸದಿದ್ದರೆ, ನೋಟಿಸ್ ಅವಧಿಯ ಮುಕ್ತಾಯದ ಮೇಲೆ ನಿವೃತ್ತಿ ಪರಿಣಾಮಕಾರಿಯಾಗುತ್ತದೆ.
ಕೇಂದ್ರ ನೌಕರನು ಮೂರು ತಿಂಗಳ ನೋಟಿಸ್ ಅವಧಿಯಲ್ಲಿ ನಿವೃತ್ತಿ ಪಡೆಯಲು ಬಯಸಿದರೆ, ಅವರು ಇದನ್ನು ಲಿಖಿತವಾಗಿ ವಿನಂತಿಸಬೇಕಾಗುತ್ತದೆ. ನೇಮಕಾತಿ ಪ್ರಾಧಿಕಾರವು ಈ ವಿನಂತಿಯನ್ನು ಪರಿಗಣಿಸುವ ಮೂಲಕ ನೋಟಿಸ್ ಅವಧಿಯನ್ನು ಕಡಿಮೆ ಮಾಡಬಹುದು. ಒಮ್ಮೆ ಸ್ವಯಂ ನಿವೃತ್ತಿ ಸೂಚನೆ ನೀಡಿದ ಕೇಂದ್ರ ನೌಕರರು ಪ್ರಾಧಿಕಾರದ ಅನುಮೋದನೆ ಇಲ್ಲದೆ ಅದನ್ನು ಹಿಂಪಡೆಯುವಂತಿಲ್ಲ. ಅವರು ಅದನ್ನು ಹಿಂಪಡೆಯಲು ಬಯಸಿದರೆ, ಅವರು ನಿವೃತ್ತಿಗೆ ಅನುಮೋದನೆಯನ್ನು ಕೋರಿದ ದಿನದ 15 ದಿನಗಳ ಮೊದಲು ಅರ್ಜಿ ಸಲ್ಲಿಸಬೇಕು.
DoP&PW ಕಛೇರಿಯಯ ಜ್ಞಾಪನ ಪತ್ರದ ಪ್ರಕಾರ, ನಿವೃತ್ತ ಸರ್ಕಾರಿ ನೌಕರರು PFRDA ನಿಯಮಗಳು 2015 ರ ಅಡಿಯಲ್ಲಿ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಾರೆ. ಅವರು ನಿವೃತ್ತಿಯ ನಂತರ ಸಾಮಾನ್ಯ ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳನ್ನು ಪಡೆಯುತ್ತಾರೆ. ಸರ್ಕಾರಿ ಉದ್ಯೋಗಿಯು ನಿವೃತ್ತಿಯ ದಿನದಂದು ವೈಯಕ್ತಿಕ ಪಿಂಚಣಿ ಖಾತೆಯನ್ನು ಮುಂದುವರಿಸಲು ಬಯಸಿದರೆ ಅಥವಾ NPS ಅಡಿಯಲ್ಲಿ ಪ್ರಯೋಜನಗಳನ್ನು ಮುಂದೂಡಲು ಬಯಸಿದರೆ, ಅವರು PFRDA ನಿಯಮಗಳ ಅಡಿಯಲ್ಲಿ ಈ ಆಯ್ಕೆಯನ್ನು ಆರಿಸಿಕೊಳ್ಳಬಹುದು.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಪ್ರಕಾರ, ವಿಶೇಷ ಸ್ವಯಂ ನಿವೃತ್ತಿ ಯೋಜನೆಯಡಿ ಹೆಚ್ಚುವರಿ ಉದ್ಯೋಗಿಯಾಗಿ ನಿವೃತ್ತಿ ಹೊಂದಿದರೆ, ಈ ನಿಯಮಗಳು ಅವರಿಗೆ ಅನ್ವಯಿಸುವುದಿಲ್ಲ. ಅಲ್ಲದೆ, ಸರ್ಕಾರಿ ಸೇವೆಯಿಂದ ನಿವೃತ್ತರಾದ ನಂತರ ಉದ್ಯೋಗಿ ಸಾರ್ವಜನಿಕ ವಲಯದ ಉದ್ಯಮ ಅಥವಾ ಸ್ವಾಯತ್ತ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರೆ, ಈ ನಿಯಮಗಳು ಅವನಿಗೆ ಅನ್ವಯಿಸುವುದಿಲ್ಲ.