ಭವಿಷ್ಯ ನಿಧಿ ಖಾತೆಯನ್ನ ಹೊಂದಿರುವ ಪ್ರತಿಯೊಬ್ಬ ನೌಕರನಿಗೂ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನೊಂದನ್ನ ನೀಡಿದೆ.
ಕೊರೊನಾದ ಸಂಕಷ್ಟ ನಡೆಯುತ್ತಿರುವ ಈ ಕಾಲದಲ್ಲಿ ಕೇಂದ್ರ ಸರ್ಕಾರ 31 ಮಾರ್ಚ್ 2022ರವರೆಗೂ ಅವರ ಸಂಬಳದಿಂದ ಕಟ್ ಆಗುವಂತಹ ಹಣವನ್ನ ಪಾವತಿಸಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆಯ ಅಡಿಯಲ್ಲಿ 30 ಜೂನ್ 2021ರವರೆಗೆ ನೀಡಲಾಗಿದ್ದ ಡೆಡ್ಲೈನ್ನ್ನು 31 ಮಾರ್ಚ್ 2022ರವರೆಗೆ ವಿಸ್ತರಿಸಿದ್ದಾರೆ.
ದೇಶದಲ್ಲಿ ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಇಪಿಎಫ್ ಖಾತೆಯನ್ನ ಹೊಂದಿರುವ ಲಕ್ಷಾಂತರ ಸದಸ್ಯರಿಗೆ ನೆಮ್ಮದಿ ನೀಡುವ ಸಲುವಾಗಿ 2020 ರ ಅಕ್ಟೋಬರ್ ತಿಂಗಳಲ್ಲಿ ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆಯ ಅಡಿಯಲ್ಲಿ ನೌಕರರ ಸಂಬಳದಿಂದ ಕಡಿತವಾಗಿ ಪಿಎಫ್ ಖಾತೆಗೆ ಜಮೆ ಆಗುತ್ತಿದ್ದ ಹಣವನ್ನ ತಾನೇ ನೀಡಲು ನಿರ್ಧರಿಸಿತ್ತು.
ಕೇಂದ್ರ ಸರ್ಕಾರವು ಈ ಯೋಜನೆಯ ಅಡಿಯಲ್ಲಿ ನೌಕರರ ಸಂಬಳದಲ್ಲಿ ಕಡಿತವಾಗುತ್ತಿದ್ದ 12 ಪ್ರತಿಶತ ಹಣವನ್ನೂ ಇನ್ಮೇಲೆ ಸರ್ಕಾರವೇ ನೋಡಿಕೊಳ್ಳಲಿದೆ. ಅಂದರೆ ಒಟ್ಟು 24 ಪ್ರತಿಶತ ಹಣವನ್ನ ಸರ್ಕಾರವೇ ಭರಿಸಲಿದೆ.
ಕೊರೊನಾದ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ನೀಡಿರುವ ಈ ಸೌಲಭ್ಯದಿಂದಾಗಿ 2 ವರ್ಷಗಳ ಕಾಲ ಪಿಎಫ್ ಖಾತೆಯ ಜವಾಬ್ದಾರಿಯನ್ನ ಸರ್ಕಾರವೇ ನೋಡಿಕೊಳ್ಳಲಿದೆ.
ಇದನ್ನ ಹೊರತುಪಡಿಸಿ ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಲಾಕ್ಡೌನ್ ಜಾರಿಯಾಗಿದ್ದ ವೇಳೆ ಕೆಲಸ ಕಳೆದುಕೊಂಡಿದ್ದ ನೌಕರರಿಗೆ ಮತ್ತೆ ಕೆಲಸ ಸಿಕ್ಕಲ್ಲಿ ಅವರೂ ಸಹ ಈ ಸೌಲಭ್ಯದ ಲಾಭವನ್ನ ಪಡೆಯಲಿದ್ದಾರೆ.
1 ಮಾರ್ಚ್ 2020 ರಿಂದ 2020 ಸೆಪ್ಟೆಂಬರ್ 30ರವರೆಗೆ ನೌಕರಿಯಲ್ಲಿದ್ದವರಿಗೆ ಸರ್ಕಾರದ ಈ ಯೋಜನೆಯ ಲಾಭ ಸಿಗಲಿದೆ.
ಇದರ ಜೊತೆಯಲ್ಲಿ ಸರ್ಕಾರದ ಈ ಯೋಜನೆಯಿಂದಾಗಿ 15 ಸಾವಿರ ರೂಪಾಯಿ ಮಾಸಿಕ ವೇತನವನ್ನ ಪಡೆಯುತ್ತಿದ್ದು, 2020ರ ಅಕ್ಟೋಬರ್ ತಿಂಗಳ ಅವಧಿಗಿಂತ ಮುನ್ನ ಕೆಲಸ ಮಾಡುತ್ತಿದ್ದವರೂ ಈ ಯೋಜನೆಯ ಪಾಲುದಾರರಾಗಿದ್ದಾರೆ.
ಈ ಯೋಜನೆಯ ಲಾಭ ಪಡೆಯಲು ನೀವು ಇಪಿಎಫ್ ವೆಬ್ಸೈಟ್ಗೆ ಲಾಗಿನ್ ಆಗಬೇಕು
ಪೇಜ್ ಓಪನ್ ಆದ ಬಳಿಕ ಸರ್ವೀಸಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಈಗ ನೀವು Employees ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
Employee Registration ಗಾಗಿ ನೀವು Register here ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ಈಗ ನಿಮ್ಮ ಮುಂದೆ ರಿಜಿಸ್ಟ್ರೇಷನ್ ಫಾರ್ಮ್ ತೆರೆದುಕೊಳ್ಳಲಿದೆ.
ರಿಜಿಸ್ಟ್ರೇಷನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳನ್ನ ಒದಗಿಸಿ.
ಇದಾದ ಬಳಿಕ ನೀವು ಸಬ್ಮಿಟ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
ಈಗ ನೀವು ಇಪಿಎಫ್ನಲ್ಲಿ ನೋಂದಾಯಿಸಲ್ಪಟ್ಟಿದ್ದೀರಾ.