ನವದೆಹಲಿ: ವಾರಣಾಸಿ ಸಂಸದ ನರೇಂದ್ರ ಮೋದಿ ಅವರು ಇಂದು ಸಂಜೆ 7:15 ಕ್ಕೆ ರಾಷ್ಟ್ರಪತಿ ಭವನದಲ್ಲಿ ಭಾರತದ ಪ್ರಧಾನಿಯಾಗಿ ಸತತ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇಂದಿನ ಸಮಾರಂಭದಲ್ಲಿ 30 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ.
ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯು ತನ್ನ ಇಬ್ಬರು ಹೊಸದಾಗಿ ಚುನಾಯಿತ ಸಂಸದರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಲು ಸಿದ್ಧರಾಗಿದ್ದಾರೆ ಎಂದು ದೃಢಪಡಿಸಿದೆ.
ಟಿಡಿಪಿ ಮಾಜಿ ಸಂಸದ ಜಯದೇವ್ ಗಲ್ಲಾ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ, ಹೊಸ ಎನ್‌ಡಿಎ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ದೃಢೀಕರಿಸಲ್ಪಟ್ಟಿರುವ ಹೊಸದಾಗಿ ಚುನಾಯಿತ ಸಂಸದರಾದ ರಾಮ್ ಮೋಹನ್ ನಾಯ್ಡು ಕಿಂಜರಾಪು ಮತ್ತು ಚಂದ್ರಶೇಖರ್ ಪೆಮ್ಮಸಾನಿ ಅವರನ್ನು ಅಭಿನಂದಿಸಿದ್ದಾರೆ.
ಮಾಧ್ಯಮಗಳ ವರದಿ ಪ್ರಕಾರ ಕರ್ನಾಟಕ ರಾಜ್ಯದ ಮೂವರು ನಾಯಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂವರಲ್ಲಿ ಒಬ್ಬರು ಕರ್ನಾಟಕದ ಮಾಜಿ ಸಿಎಂ ಮತ್ತು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ. ಇ
ಜೆಯು(ಯು) ಸಂಸದರಾದ ಲಲನ್ ಸಿಂಗ್, ಸಂಜಯ್ ಕುಮಾರ್ ಝಾ, ರಾಮ್ ನಾಥ್ ಠಾಕೂರ್, ಸುನಿಲ್ ಕುಮಾರ್ ಮತ್ತು ಕೌಶಲೇಂದ್ರ ಕುಮಾರ್ ಅವರಿಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಿದೆ.
ಇತರ ಮೈತ್ರಿ ಪಾಲುದಾರರಲ್ಲಿ ಚಿರಾಗ್ ಪಾಸ್ವಾನ್, ಅನುಪ್ರಿಯಾ ಪಟೇಲ್(ಅಪ್ನಾ ದಳ ಪಕ್ಷದ ಮುಖ್ಯಸ್ಥರು), ಜಯಂತ್ ಚೌಧರಿ (ರಾಷ್ಟ್ರೀಯ ಲೋಕದಳದ ಮುಖ್ಯಸ್ಥರು), ಮತ್ತು ಜಿತನ್ ರಾಮ್ ಮಾಂಝಿ (ಹಿಂದೂಸ್ತಾನಿ ಅವಾಮ್ ಮೋರ್ಚಾದ ಮುಖ್ಯಸ್ಥರು) ಸೇರಿದ್ದಾರೆ.
ಸಚಿವರಾಗುವ ಬಿಜೆಪಿ ಸಂಸದರು…?
ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ನಿತಿನ್ ಗಡ್ಕರಿ, ಅಮಿತ್ ಶಾ, ಡಿಕೆ ಅರುಣಾ, ಡಿ ಅರವಿಂದ್, ಬಸವರಾಜ್ ಬೊಮ್ಮಾಯಿ, ಬಿಪ್ಲಬ್ ದೇವ್, ಸುರೇಶ್ ಗೋಪಿ, ಪಿಯೂಷ್ ಗೋಯಲ್, ಪ್ರತಾಪ್ ರಾವ್ ಜಾಧವ್, ಸಂಜಯ್ ಜೈಸ್ವಾಲ್, ಪ್ರಲ್ಹಾದ್ ಜೋಶಿ, ಗೋವಿಂದ್ ಕಾರಜೋಳ್ ಸೇರಿದಂತೆ ಬಿಜೆಪಿ ನಾಯಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.
ಪಿ.ಸಿ. ಮೋಹನ್, ಬಿಜುಲಿ ಕಲಿತ ಮೇಧಿ, ಧರ್ಮೇಂದ್ರ ಪ್ರಧಾನ್, ಜಿತಿನ್ ಪ್ರಸಾದ್, ದಗ್ಗುಬಾಟಿ ಪುರಂದೇಶ್ವರಿ, ನಿತ್ಯಾನಂದ್ ರೈ, ಏಟಾಲ ರಾಜೇಂದರ್, ಕಿಶನ್ ರೆಡ್ಡಿ, ಕಿರಣ್ ರಿಜಿಜು, ರಾಜೀವ್ ಪ್ರತಾಪ್ ರೂಡಿ, ಮನಮೋಹನ್ ಸಮಲ್, ಬಂಡಿ ಸಂಜಯ್, ಜ್ಯೋತಿರಾದಿತ್ಯ ಸಿಂಧಿಯಾ, ಜುಗಲ್ ಕಿಶೋರ್ ಸಿಂಗ್ ಶರ್ಮಾ, ಗಜತ್ ದುಶ್ಯೇಂದ್ರ ಸಿಂಗ್ ಶರ್ಮಾ ಸಿಂಗ್, ಜಿತೇಂದ್ರ ಸಿಂಗ್, ಸರ್ಬಾನಂದ ಸೋನೋವಾಲ್ ಮತ್ತು ಶಾಂತನು ಠಾಕೂರ್ ಕೂಡ ಸಂಪುಟ ಸೇರುವ ಸಾಧ್ಯತೆ ಇದೆ.
ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ನರೇಂದ್ರ ಮೋದಿ ಅವರು ತಮ್ಮ ನಿವಾಸ 7 ಲೋಕ ಕಲ್ಯಾಣ ಮಾರ್ಗದಲ್ಲಿ ನೂತನ ಸಚಿವ ಸಂಪುಟದ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ. ಸಮಾರಂಭಕ್ಕೆ ರಾಷ್ಟ್ರಪತಿ ಭವನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.