ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಆಂತರಿಕ ಬಿಕ್ಕಟ್ಟು ಶಮನಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಖಾಡಕ್ಕೆ ಧುಮುಕಿದ್ದಾರೆ. ಸಿಎಂ ಯಡಿಯೂರಪ್ಪ ನಾಯಕತ್ವದ ವಿಚಾರವಾಗಿ ಅರುಣ್ ಸಿಂಗ್, ಸಿಎಂ, ಬಿಜೆಪಿ ಶಾಸಕರ ಜೊತೆ ಒನ್ ಟು ಒನ್ ಮೀಟಿಂಗ್ ನಡೆಸಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರೋಧಿ ಬಣಗಳ ವಿರುದ್ಧ ಕೆಂಡಕಾರಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ ಅಂದರೆ ಅದಕ್ಕೆ ಮುಖ್ಯ ಕಾರಣ ಬಿ.ಎಸ್ ಯಡಿಯೂರಪ್ಪ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಯಡಿಯೂರಪ್ಪ ಉತ್ತಮ ಆಡಳಿತ ನೀಡ್ತಿದ್ದಾರೆ. ಹೀಗಿರುವಾಗ ಯಾವ ಕಾರಣಕ್ಕೆ ನಾಯಕತ್ವವನ್ನ ಬದಲಾವಣೆ ಮಾಡಬೇಕು ಎಂದು ಪ್ರಶ್ನೆ ಮಾಡಿದ್ರು.
ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪರೇ ರಾಜ್ಯ ಸಿಎಂ ಸ್ಥಾನದಲ್ಲಿ ಮುಂದುವರೀತಾರೆ. ಮಾತ್ರವಲ್ಲದೇ ಮುಂದಿನ ಚುನಾವಣೆಯನ್ನೂ ಸಹ ನಾವು ಯಡಿಯೂರಪ್ಪರ ಮುಂದಾಳತ್ವದಲ್ಲೇ ಎದುರಿಸಲಿದ್ದೇವೆ.
ಬಿಜೆಪಿ ಹೈಕಮಾಂಡ್ ವಿರೋಧಿ ಬಣಗಳ ವಿರುದ್ಧ ಕಠಿಣ ಕ್ರಮವನ್ನ ಕೈಗೊಳ್ಳಬೇಕು. ಈ ಮೂಲಕ ಈ ವಿವಾದಕ್ಕೆ ಇಂದೇ ತೆರೆ ಎಳೆಯುವಂತೆ ಆಗಬೇಕು ಎಂದು ಆಗ್ರಹಿಸಿದ್ರು.