
ಹೊಸಪೇಟೆ: ವಿವಾಹ ನಿಶ್ಚಯವಾಗಿರುವ ಯುವತಿಯೊಂದಿಗೆ ಬೇಗನೆ ಮದುವೆ ಮಾಡುವಂತೆ ಯುವಕನೊಬ್ಬ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಹೊಸಪೇಟೆ ತಾಲ್ಲೂಕಿನಲ್ಲಿ ನಡೆದಿದೆ.
ಮರಿಯಮ್ಮನಹಳ್ಳಿಯ ಚಿರಂಜೀವಿ(23) ಈ ರೀತಿ ಹೈಡ್ರಾಮಾ ಸೃಷ್ಠಿಸಿದ ಯುವಕ. ನಿಶ್ಚಯವಾಗಿದ್ದ ಯುವತಿಯೊಂದಿಗೆ ಬೇಗನೆ ಮದುವೆ ಮಾಡುವಂತೆ ಪೋಷಕರಿಗೆ ಒತ್ತಾಯಿಸಿ ಮೊಬೈಲ್ ಟವರ್ ಏರಿದ್ದಾನೆ. ಅಣ್ಣನ ಮದುವೆಯಾದ ನಂತರ ನಿನಗೆ ಮದುವೆ ಮಾಡುವುದಾಗಿ ಪೋಷಕರು ಹೇಳಿದರೂ ಕೇಳದ ಆತ ಮೊಬೈಲ್ ಟವರ್ ಏರಿ ಕುಳಿತಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನವೊಲಿಸಿ ಕೆಳಗಿಳಿಸಿದ್ದಾರೆ.