
ಮೀರತ್: ಮೊಬೈಲ್ ಕದಿಯಲು ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಮಹಿಳೆ ಹಾಗೂ ಸ್ಥಳೀಯರು ಹಿಡಿದು ವಿವಸ್ತ್ರಗೊಳಿಸಿ, ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಜನಸಂದಣಿಯಿಂದ ಕೂಡಿದ್ದ ಮಾರ್ಕೆಟ್ ನಲ್ಲಿ ಯುವಕನೊಬ್ಬ ಮಹಿಳೆಯ ಮೊಬೈಲ್ ಕಿತ್ತುಕೊಂಡು ಎಸ್ಕೇಪ್ ಆಗುತ್ತಿದ್ದ. ಈ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು ಯುವಕನನ್ನು ಹಿಡಿದ್ದಾರೆ.
ಆಕ್ರೋಶಗೊಂಡ ಮಹಿಳೆ ಯುವಕನನ್ನು ವಿವಸ್ತ್ರಗೊಳಿಸಿ, ಮನಬಂದಂತೆ ಥಳಿಸಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆರೋಪಿ ಯುವಕ ತನ್ನನ್ನು ಬಿಟ್ಟುಬಿಡುವಂತೆ ಕೇಳಿಕೊಂಡರೂ ಮಹಿಳೆಯ ಕೋಪ ಕಡಿಮೆಯಾಗಿಲ್ಲ. ಯುವಕನ ತಲೆಕೂದಲು ಹಿಡಿದು ಎಳೆದು ಇನ್ನಷ್ಟು ಹಿಗ್ಗಾಮುಗ್ಗಾ ಹೊಡೆದಿದ್ದಾಳೆ. ಆರೋಪಿ ಯುವಕನನ್ನು ಅರ್ಮಾನ್ ಎಂದು ಗುರುತಿಸಲಾಗಿದೆ.
ಬಳಿಕ ಸಾರ್ವಜನಿಕರು ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬೇಗಂಪುಲ್ ಬಳಿ ಈ ಘಟನೆ ನಡೆದಿದೆ.