![](https://kannadadunia.com/wp-content/uploads/2025/02/bdf660ee-86ea-4832-ba83-9e805fb99edd.jpg)
ಬೆಂಗಳೂರು: ಪ್ರಯಾಣಿಕರು ಬಸ್ ಹತ್ತುವಾಗಲೇ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದಿದೆ.
ವಿಜಯ್ ದಾಸ್ ಬಂಧಿತ ಆರೋಪಿ. ಓಡಿಶಾ ಮೂಲದ ಆರೋಪಿ ವಿಜಯ್ ದಾಸ್ ನನ್ನು ದಾಸರಹಳ್ಳಿ ಬಸ್ ನಿಲ್ದಾಣದ ಬಳಿ ಪೀಣ್ಯಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 10 ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ದಾಸ್, ಶೋಕಿಗಾಗಿ ಮೊಬೈಲ್ ಕಳ್ಳತನ ಮಾಡುತ್ತಿದ್ದ. ಬಸ್ ಗಾಗಿ ಕಾಯುತ್ತಿದ್ದ ಪ್ರಯಾಣಿಕರೇ ಈತನ ಟಾರ್ಗೆಟ್ ಆಗಿದ್ದು, ಬಸ್ ಹತ್ತುವಾಗಲೇ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ