ಅಮೆರಿಕಾದ ಮೆಸಾಚುಸೆಟ್ಸ್ ತಾಂತ್ರಿಕ ವಿದ್ಯಾಲಯದ ಮಾಹಿತಿ ತಂತ್ರಜ್ಞಾನ ತಂಡ ನಡೆಸಿದ ಅಧ್ಯಯನದಲ್ಲಿ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ. ಸೇತುವೆ ಮೇಲೆ ವಾಹನ ಹಾದು ಹೋಗುವಾಗ ಅದು ಎಷ್ಟರಮಟ್ಟಿಗೆ ಸುರಕ್ಷಿತವಾಗಿದೆ ಎಂಬುದರ ಮಾಹಿತಿಯನ್ನು ಸ್ಮಾರ್ಟ್ ಫೋನ್ ನೀಡಬಲ್ಲದು ಎಂಬ ಸಂಗತಿ ತಿಳಿದು ಬಂದಿದೆ.
ಸೇತುವೆಗಳ ಸಾಮರ್ಥ್ಯವನ್ನು ಪರೀಕ್ಷಿಸಲು ವಿವಿಧ ಭಾಗಗಳಲ್ಲಿ ಸೆನ್ಸಾರ್ ಅಳವಡಿಸಲಾಗುತ್ತದೆ. ವಾಹನಗಳು ಹಾದು ಹೋದಾಗ ಈ ಸೆನ್ಸಾರ್ ಸೇತುವೆ ಅಲುಗಾಟವನ್ನು ದಾಖಲಿಸುತ್ತಿದ್ದು, ತಂತ್ರಜ್ಞರು ಇದರ ಆಧಾರದ ಮೇರೆಗೆ ಅದು ಎಷ್ಟರಮಟ್ಟಿಗೆ ಬಲಯುತವಾಗಿದೆ ಎಂಬುದನ್ನು ಅಳೆಯುತ್ತಿದ್ದರು.
ಇದೇ ರೀತಿ ಮೊಬೈಲ್ ನಲ್ಲಿ ವಿಶೇಷವಾಗಿ ರೂಪಿಸಿದ ಸಾಫ್ಟ್ವೇರ್ ಅಳವಡಿಸಿಕೊಂಡು ಅದರಲ್ಲಿ ವಾಹನ ಸೇತುವೆ ಮೇಲೆ ಹಾದು ಹೋಗುವಾಗ ಉಂಟಾದ ವೈಬ್ರೇಶನ್ ನಲ್ಲಿ ಎಕ್ಸಲೋ ಮೀಟರಿನಲ್ಲಿ ದಾಖಲಾಗಿದ್ದು, ಇದು ಸೆನ್ಸಾರ್ ಮೂಲಕ ಪಡೆಯಲಾದ ವಿವರಗಳಿಗೆ ಸಮೀಪದಲ್ಲಿತ್ತು ಎನ್ನಲಾಗಿದೆ. ಹೀಗಾಗಿ ಸ್ಮಾರ್ಟ್ ಫೋನ್ ಕೂಡ ಸೇತುವೆ ಸಾಮರ್ಥ್ಯವನ್ನು ಪತ್ತೆ ಹಚ್ಚಬಹುದಾಗಿದ್ದು, ವಿಜ್ಞಾನಿಗಳು ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತಿದ್ದಾರೆ.