ಬೆಂಗಳೂರು: ಮೊಬೈಲ್ ಕೊಡಿಸದ ಕಾರಣಕ್ಕೆ ಮಗನೇ ಹೆತ್ತ ತಾಯಿಯನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಬೇಗೂರಿನ ಮೈಲಸಂದ್ರದಲ್ಲಿ ಇಂತಹ ಪೈಶಾಚಿಕ ಕೃತ್ಯ ನಡೆದಿದೆ. ತಾಯಿ ಕತ್ತು ಹಿಸುಕಿ ಪುತ್ರ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ದುಡ್ಡು ಇಲ್ಲವೆಂದು ಮೊಬೈಲ್ ಕೊಡಿಸಲು ತಾಯಿ ನಿರಾಕರಿಸಿದ್ದರು. ಕಳೆದ ಒಂದು ವಾರದಿಂದ ಮೊಬೈಲ್ ಕೊಡಿಸುವಂತೆ ಆರೋಪಿ ಪೀಡಿಸುತ್ತಿದ್ದ. ನಿನ್ನೆ ಕೂಡ ಮೊಬೈಲ್ ಕೊಡಿಸುವಂತೆ ತಾಯಿಯೊಂದಿಗೆ ಜಗಳವಾಡಿದ್ದು, ಹಣ ಇಲ್ಲವೆಂದು ಮೊಬೈಲ್ ಕೊಡಿಸಲು ತಾಯಿ ನಿರಾಕರಿಸಿದ್ದರು. ಕೋಪಗೊಂಡ ಮಗ ಕತ್ತುಹಿಸುಕಿ ತಾಯಿಯನ್ನು ಕೊಲೆ ಮಾಡಿದ್ದಾನೆ. ಬೇಗೂರು ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.