ನವದೆಹಲಿ: ಟೆಲಿಕಾಂ ಸೇವೆಗಳನ್ನು ಮತ್ತಷ್ಟು ಗ್ರಾಹಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಲವು ಹೊಸ ನಿಯಮ ಜಾರಿಗೊಳಿಸಿದೆ.
ಟೆಲಿಕಾಂ ಆಪರೇಟರ್ ಗಳು ಡೇಟ್ ಪ್ಯಾಕ್ ಒಳಗೊಳ್ಳದ ಕೇವಲ ಕರೆ ಮತ್ತು ಎಸ್ಎಂಎಸ್ ಸೌಲಭ್ಯ ಹೊಂದಿರುವ ಪ್ಯಾಕೇಜ್ ಗಳನ್ನು ಜಾರಿಗೊಳಿಸಬೇಕಿದೆ. ಈಗಲೂ ಬೇಸಿಕ್ ಮೊಬೈಲ್ ಸೆಟ್ ಬಳಸುವ ಸುಮಾರು 15 ಕೋಟಿ ಜನರಿಗೆ ಅನುಕೂಲ ಒದಗಿಸಲು ಟ್ರಾಯ್ ಈ ಕ್ರಮ ಕೈಗೊಂಡಿದೆ.
ಇದುವರೆಗೆ ಎಲ್ಲಾ ರಿಚಾರ್ಜ್ ಪ್ಲಾನ್ ಗಳಲ್ಲಿಯೂ ಕಡ್ಡಾಯವಾಗಿ ದುಬಾರಿ ಬೆಲೆ ನೀಡಿ ಡೇಟಾ ಪ್ಲ್ಯಾನ್ ಗಳನ್ನು ಖರೀದಿಸಬೇಕಿತ್ತು. ಸ್ಪೆಷಲ್ ಟ್ಯಾರಿಫ್ ವೋಚರ್ ಗಳ ವ್ಯಾಲಿಡಿಟಿ ಅವಧಿಯನ್ನು ಕೂಡ ವಿಸ್ತರಿಸುವಂತೆ ಟ್ರಾಯ್ ಸೂಚಿಸಿದೆ. ಟೆಲಿಕಾಂ ಸೇವೆಗಳನ್ನು ಗ್ರಾಹಕ ಸ್ನೇಹಿ ಹಾಗೂ ಅಗ್ಗವಾಗಿಸುವ ನಿಟ್ಟಿನಲ್ಲಿ ಅನೇಕ ಹೊಸ ನಿಯಮಗಳನ್ನು ಟ್ರಾಯ್ ಜಾರಿಗೊಳಿಸಿದೆ.