alex Certify ಚೆನ್ನೈನಲ್ಲಿ ಜಲ್ಲಿಕಟ್ಟು ಆಯೋಜಿಸಲು ಕಮಲ್ ಹಾಸನ್ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆನ್ನೈನಲ್ಲಿ ಜಲ್ಲಿಕಟ್ಟು ಆಯೋಜಿಸಲು ಕಮಲ್ ಹಾಸನ್ ಪ್ಲಾನ್

ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಯನ್ನು ಚೆನ್ನೈನಲ್ಲಿ ಆಯೋಜಿಸುವುದಾಗಿ ನಟ ಮತ್ತು ಮಕ್ಕಳ್ ನೀಧಿ ಮೈಯಂ(ಎಂಎನ್‌ಎಂ) ನಾಯಕ ಕಮಲ್ ಹಾಸನ್ ಹೇಳಿದ್ದಾರೆ.

ಶುಕ್ರವಾರ ಅವರು ಮಾತನಾಡಿ, ಚೆನ್ನೈನಲ್ಲಿ ಗ್ರಾಮೀಣ ಕ್ರೀಡೆಯನ್ನು ಆಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಂದ ಅಗತ್ಯವಿರುವ ಅನುಮತಿ ಪಡೆಯಲು ತಮ್ಮ ಪಕ್ಷದ ಕಾರ್ಯಕರ್ತರು ಪ್ರಯತ್ನಿಸಿದ್ದಾರೆ. ನಗರ ನಿವಾಸಿಗಳಿಗೆ ಕ್ರೀಡೆಯ ಶ್ರೇಷ್ಠತೆ, ಮಹತ್ವದ ಬಗ್ಗೆ ತಿಳಿಸುವುದು ನಮ್ಮ ಆಶಯವಾಗಿದೆ. ಜಲ್ಲಿಕಟ್ಟು ಆಯೋಜಿಸಲು ನಾವು ಒಪ್ಪಿಗೆ ಪಡೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.

2017 ರಲ್ಲಿ ತಮಿಳುನಾಡಿನ ನಿವಾಸಿಗಳು ಯಾವುದೇ ರಾಜಕೀಯ ಬೇಧವಿಲ್ಲದೆ ಮರೀನಾ ಬೀಚ್‌ನಲ್ಲಿ ಕ್ರೀಡೆಯ ಮೇಲಿನ ನಿಷೇಧದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದರು. ತಮಿಳು ಅಸ್ಮಿತೆ ಮತ್ತು ಸಂಪ್ರದಾಯವನ್ನು ಸಂರಕ್ಷಿಸುವ ಉದ್ದೇಶದಿಂದ ನಡೆದ ಪ್ರತಿಭಟನೆಯು ರಾಜ್ಯದಲ್ಲಿ ನಾಯಕರಿಲ್ಲದ ಅತಿದೊಡ್ಡ ಜನಾಂದೋಲನವೆಂದು ಪರಿಗಣಿಸಲ್ಪಟ್ಟಿದೆ.

ಜಲ್ಲಿಕಟ್ಟುವಿನ ಗೂಳಿ ಪಳಗಿಸುವ ಸ್ಪರ್ಧೆಯು ಜನವರಿ ಮಧ್ಯದಲ್ಲಿ ಪೊಂಗಲ್ ಹಬ್ಬದ ಸಮಯದಲ್ಲಿ ತಮಿಳುನಾಡಿನಲ್ಲಿ ಋತುವು ಪ್ರಾರಂಭವಾಗುತ್ತದೆ. ಮಧುರೈನ ಅಲಂಗನಲ್ಲೂರು, ಅವನಿಯಪುರಂ ಮತ್ತು ಪಾಲಮೇಡು ಮತ್ತು ಪುದುಕೋಟೈ, ತಿರುಚಿರಾಪಳ್ಳಿ ಮತ್ತು ದಿಂಡಿಗಲ್‌ನ ಗ್ರಾಮೀಣ ಬೆಲ್ಟ್‌ ಗಳಲ್ಲಿ ಜನಪ್ರಿಯವಾಗಿ ನಡೆಯುತ್ತದೆ. ಈ ಬಾರಿ ವಿವಿಧ ಕಾನೂನು ಸಮಸ್ಯೆಗಳಿಂದಾಗಿ ಮರೀನಾ ಬೀಚ್ ನಡೆಯಲು ಸಾಧ್ಯವಿಲ್ಲ. ಆದರೆ, ಅದು ಬೇರೆ ಜಾಗದಲ್ಲಿ ಆಗಬಹುದು ಎಂದು ಕಮಲ್ ಹಾಸನ್ ಹೇಳಿದ್ದಾರೆ.

2017 ರಲ್ಲಿ ಜಲ್ಲಿಕಟ್ಟು ಪ್ರತಿಭಟನೆಯ ನಂತರ, ತಮಿಳುನಾಡು ಸರ್ಕಾರವು ಮರೀನಾ ಬೀಚ್‌ನಲ್ಲಿ ಪ್ರತಿಭಟನೆ ನಿಷೇಧಿಸಿ ಆದೇಶವನ್ನು ಹೊರಡಿಸಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...