![](https://kannadadunia.com/wp-content/uploads/2018/11/election-640x398.jpg)
ಬೆಂಗಳೂರು: ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಕಾರ್ಯವು ಡಿ.14ರಂದು ನಡೆಯಲಿದೆ. ಮತ ಎಣಿಕೆಗೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮತ ಪೆಟ್ಟಿಗೆಗಳನ್ನು ಇಡಲಾದ ಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆ 7:30 ರೊಳಗಾಗಿ ಮತ ಎಣಿಕೆ ಸಿಬ್ಬಂದಿಗಳ ಮತ ಎಣಿಕೆಗಾಗಿ ಕೌಂಟಿಗ್ ಟೇಬಲ್ ಗಳನ್ನುಸಿದ್ಧಪಡಿಸಲಾಗಿದೆ. ಪ್ರಾಶಸ್ತದ ಮತಗಳ ಆಧಾರದ ಮೇಲೆ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಅತಿಹೆಚ್ಚು ಪ್ರಾಶಸ್ತ್ರದ ಮತಗಳ ಪಡೆದವರು ಹಾಗೂ ಎರಡನೇ ಮೂರನೇ, ನಾಲ್ಕನೇ ಪ್ರಾಶಸ್ತ್ರದ ಮತಗಳನ್ನು ವಿಂಗಡಿಸಿ ಏಣಿಕೆ ಪ್ರಕ್ರಿಯೆ ನಡೆಸಲಾಗುತ್ತದೆ.
ಬ್ಯಾಲೇಟ್ ಪೇಪರ್‌ಗಳ ವಿಗಂಡಣೆ ಮಾಡಿ ನಂತರ ಏಣಿಕೆ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ. ಮತದಾನದಲ್ಲಿ ಅಪಮೌಲ್ಯವಾಗುವ ಮತಗಳನ್ನು ಹೊರತುಪಡಿಸಿ ಇತರೆ ಮತಗಳನ್ನು ಏಣಿಕೆ ನಡೆಸಲಾಗುತ್ತದೆ. ಎಣಿಕೆ ಪೂರ್ಣವಾಗಿ ಮುಗಿದ ನಂತರವಷ್ಟೇ ಫಲಿತಾಂಶ ಘೋಷಣೆ ಮಾಡಲಾಗುತ್ತದೆ.
ಈಗಾಗಲೇ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದ್ದು, ಮತ ಎಣಿಕೆ ಹಿನ್ನೆಲೆ ಕೇಂದ್ರದ ಸುತ್ತಲೂ 100 ಮೀಟರ್ ಅಂತರದಲ್ಲಿ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಸ್ಯಾನಿಟೈಸೇಷನ್ ಮಾಡುವುದರ ಜೊತೆಗೆ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಕೌಂಟಿAಗ್ ನಡೆಸಲು ಸಿದ್ಧತೆ ನಡೆಸಲಾಗಿದೆ.
ಪೊಲೀಸ್ ಭದ್ರತೆ:
ಮತ ಎಣಿಕೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸಿಸಿ ಕ್ಯಾಮೆರಾಗಳ ಕಣ್ಗಾವಲು ನಿಯೋಜಿಸಲಾಗಿದೆ.