ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಗೆ ಐದು ಸ್ಥಾನ ಲಾಭವಾಗಿದೆ. ಕಾಂಗ್ರೆಸ್ ಗೆ ಮೂರು ಮತ್ತು ಜೆಡಿಎಸ್ ಗೆ ಎರಡು ಸ್ಥಾನಗಳು ನಷ್ಟವಾಗಿವೆ.
ಬಿಜೆಪಿ ಹಾಗೂ ಕಾಂಗ್ರೆಸ್ ತಲ 11 ಸ್ಥಾನಗಳಿಸಿದ್ದು, ಜೆಡಿಎಸ್ 2 ಸ್ಥಾನಗಳಲ್ಲಿ, ಪಕ್ಷೇತರ ಒಬ್ಬರು ಜಯಗಳಿಸಿದ್ದಾರೆ. ಮೇಲ್ಮನೆಯಲ್ಲಿ ಬಿಜೆಪಿ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಎದುರಾಗಿದೆ.
2015 ರಲ್ಲಿ 6 ಸ್ಥಾನ ಗಳಿಸಿದ್ದ ಬಿಜೆಪಿ ಹೆಚ್ಚುವರಿಯಾಗಿ 5 ಸ್ಥಾನಗಳನ್ನು ಪಡೆದುಕೊಂಡಿದೆ. 2015 ರಲ್ಲಿ 14 ಸೀಟು ಗಳಿಸಿದ್ದ ಕಾಂಗ್ರೆಸ್ ಮೂರು ಸ್ಥಾನಗಳನ್ನು ಕಳೆದುಕೊಂಡಿದೆ. ಜೆಡಿಎಸ್ ನಾಲ್ಕರಲ್ಲಿ ಎರಡು ಸ್ಥಾನ ಕಳೆದುಕೊಂಡಿದೆ.
ವಿಧಾನಪರಿಷತ್ ನಲ್ಲಿ ಒಟ್ಟು 75 ಸದಸ್ಯ ಬಲವಿದ್ದು, ಬಹುಮತಕ್ಕೆ 38 ಸೀಟ್ ಬೇಕಿದೆ. ಬಿಜೆಪಿ 37, ಕಾಂಗ್ರೆಸ್ 26, ಜೆಡಿಎಸ್ 10 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ.