MLA ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿನವ ಹಾಲಶ್ರೀ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರು ಚಾಲಕನನ್ನ ವಿಚಾರಣೆ ನಡೆಸಿದರೆ ಹಾಲಶ್ರೀ ಶ್ರೀಗಳ ಸುಳಿವು ಸಿಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಚಾಲಕನನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಕಚೇರಿಗೆ ಕರೆ ತರುತ್ತಿದ್ದಾರೆ ಎಂದು ತಿಳಿದು ಬಂದಿದೆ.ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿಗೆ 5 ಕೋಟಿ ವಂಚಿಸಿದ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಸದ್ಯ ಆಸ್ಪತ್ರೆಯಲ್ಲಿದ್ದಾರೆ.
ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಎಂಬುವವರಿಗೆ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ಬರೋಬ್ಬರಿ 5 ಕೋಟಿ ವಂಚಿಸಿತ್ತು. ಕಬಾಬ್ ಮಾರುವ ವ್ಯಕ್ತಿ, ಸಲೂನ್ ಮೇಕಪ್ ಮ್ಯಾನ್ ಹಾಗೂ ಇನ್ನೋರ್ವನಿಗೆ ಆರ್.ಎಸ್.ಎಸ್ ಮುಖಂಡನ ವೇಷ, ಬಿಜೆಪಿ ಕೇಂದ್ರ ನಾಯಕರ ವೇಷ ತೊಡಿಸಿ ನಾಟಕವಾಡಲು ರಂಗತಾಲೀಮು ನಡೆಸಿ ಉದ್ಯಮಿಯನ್ನು ವಂಚಿಸಿದ್ದರು.