
ಬೆಂಗಳೂರು: ಶಾಸಕರ ವೇತನ ಹೆಚ್ಚಳ ಮಾಡಲಾಗಿದೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ವೇತನ ಪರಿಷ್ಕರಣೆಯಾಗಿದ್ದು, ಏಪ್ರಿಲ್ ನಿಂದ ವೇತನದಲ್ಲಿ ಏರಿಕೆಯಾಗಿದೆ.
ಮಾಸಿಕ 2,05,000 ರೂ.ಗೆ ಏರಿಕೆಯಾಗಿದೆ. ಮೂಲವೇತನ 40,000 ರೂ., ಕ್ಷೇತ್ರ ಭತ್ಯೆ 60 ಸಾವಿರ ರೂ., ಚುನಾವಣೆ ಕ್ಷೇತ್ರದ ಪ್ರಯಾಣ ಭತ್ಯೆ 60 ಸಾವಿರ ರೂ., ಆಪ್ತ ಸಹಾಯಕರು ಮತ್ತು ಕೊಠಡಿ ಸೇವಕರ ಭತ್ಯೆ 20 ಸಾವಿರ ರೂ., ದೂರವಾಣಿ ಭತ್ಯೆ 20 ಸಾವಿರ ರೂ., ಅಂಚೆ ವೆಚ್ಚ 5 ಸಾವಿರ ರೂ. ನೀಡಲಾಗುವುದು. ಇದರಲ್ಲಿ ತಿಂಗಳಿಗೆ 5 ಸಾವಿರ ರೂಪಾಯಿ ಅಂಚೆ ವೆಚ್ಚ ಮತ್ತು ದೂರವಾಣಿ ಭತ್ಯೆ 20 ಸಾವಿರ ರೂ. ನೀಡುತ್ತಿರುವುದು ಚರ್ಚೆಗೆ ಕಾರಣವಾಗಿದೆ.