ಧಾರವಾಡ: ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ವೇತನ ಆಯೋಗ ರಚಿಸುವ ಮಾದರಿಯಲ್ಲಿ ಶಾಸಕರ ವೇತನ ಪರಿಷ್ಕರಣೆಗೂ ಆಯೋಗ ರಚಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಧಾರವಾಡ ಜರ್ನಲಿಸ್ಟ್ ಗಿಲ್ಡ್ ವತಿಯಿಂದ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಶಾಸಕರ ವೇತನವನ್ನು ಶಾಸಕರೇ ಹೆಚ್ಚಿಸಿಕೊಳ್ಳುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಚೇರಿ, ವಾಹನ, ಚಾಲಕರು ಸೇರಿ ಇರುವ ವೇತನದಲ್ಲಿ ಎಲ್ಲವನ್ನು ನಿರ್ವಹಣೆ ಮಾಡುವುದು ಸಾಧ್ಯವಿಲ್ಲ. ಶಾಸಕರಿಗೆ ಖರ್ಚುಗಳು ಇರುತ್ತವೆ. ಖರ್ಚು ನಿಭಾಯಿಸಲು ಏನು ವ್ಯವಸ್ಥೆ ಮಾಡಬೇಕು. ವೇತನ, ಪ್ರವಾಸ ಭತ್ಯೆ ಮೊದಲಾದವುಗಳ ಬಗ್ಗೆ ಆಯೋಗ ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತದೆ. ಶಾಸಕರಿಗೆ ವಾಹನ ಸೌಲಭ್ಯ ಇರುವುದಿಲ್ಲ. ಬಸ್ ನಲ್ಲಿ ಓಡಾಡಿ ಕೆಲಸ ಮಾಡಲು ಆಗುವುದಿಲ್ಲ. ಆಡಳಿತದಲ್ಲಿ ಸುಧಾರಣೆ ಆಗಬೇಕಿದೆ ಎಂದು ಹೇಳಿದ್ದಾರೆ.