ಬೆಂಗಳೂರು : ನರ್ಸ್ ಗಳ ಸೌಂದರ್ಯ ಬಣ್ಣಿಸಿದ್ದ ಮಾತನಾಡಿದ್ದ ಶಾಸಕ ರಾಜು ಕಾಗೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಿಕೆ ನಾಗನೂರ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾಸಕರು ಕೆಲವು ವರ್ಷಗಳ ಹಿಂದೆ ನನಗೆ ಆಪರೇಷನ್ ಆಗಿತ್ತು, ಡಾಕ್ಟರ್ಗಳು ಸರ್ ಚೆನ್ನಾಗಿದ್ದೀರಾ ಎಂದು ಬಂದು ಆರೋಗ್ಯ ವಿಚಾರಿಸುತ್ತಿದ್ದರು. ಆದಕ್ಕೆ ನಾನು ಹೇಳಿದೆ, ಸರ್..ನಾನು ಚೆನ್ನಾಗಿದ್ದೇನೆ..ಆದರೆ ನಿಮ್ಮಲ್ಲಿ ಚಂದ ಚಂದದ ನರ್ಸ್ ಗಳು ಇದ್ದಾರೆ, ಚಂದ ಚಂದದ ಹುಡುಗಿಯರು ಬಂದು ನನಗೆ ಅಜ್ಜ ಅನ್ನುತ್ತಿದ್ದರು. ಅಜ್ಜಾ ಅಂತಾ ಕರೆದಿದ್ದಕ್ಕೆ ನನಗೆ ಬೇಸರ ಆಗುತ್ತಿತ್ತು… ಎಂದು ಹೇಳಿದ್ದರು.
ಯಾರಿಗಾದರೂ ನನ್ನ ಮಾತಿನಿಂದ ನೋವಾಗಿದ್ರೆ ಕ್ಷಮೆ ಕೇಳುತ್ತಿದ್ದೇನೆ. ಯಾವುದೇ ಉದ್ದೇಶದಿಂದ ನಾನು ಮಾತನಾಡಿಲ್ಲ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.